ಚೈತ್ರಾಳ ಆಸ್ಪತ್ರೆಗೆ ತಗಲುವ ವೆಚ್ಚ ಬರೋಬ್ಬರಿ 30 ಲಕ್ಷ ಆಗಿರುವುದರಿಂದ ಅಷ್ಟು ಹಣ ಭರಿಸಲು ಸಾಧ್ಯವಿಲ್ಲದ ಕಾರಣ ತನ್ನ ಆರಾಧ್ಯದೈವ ಸುದೀಪ್ ಮೊರೆ ಹೋಗಿದ್ದಾರೆ.
ಬೆಂಗಳೂರು(ಜು.28): ಸುದೀಪ್ ಅಭಿಮಾನಿಯೋಬ್ಬಳು ಆಸ್ಪತ್ರೆಗೆ ದಾಖಲಾಗಿದ್ದು , ಚಿಕಿತ್ಸೆಗಾಗಿ ನಟ ಸುದೀಪ್ ಮೋರೆ ಹೋಗಿದ್ದಾರೆ. 23 ವರ್ಷದ ಚೈತ್ರ ಅನ್ನೊ ಯುವತಿ ಬೆಂಗಳೂರಿನ ಬನ್ನೇರುಘಟ್ಟದಲ್ಲಿರೋ ಅಪೋಲೊ ಆಸ್ಪತ್ರೆಯಲ್ಲಿ ಆನಾರೋಗ್ಯದಿಮದ ಬಳಲುತ್ತಿದ್ದಾರೆ. ಸದ್ಯ ಚೈತ್ರ ಅನ್ನೊ ಯುವತಿ ಗರ್ಭಿಣಿ ಇರೋ ಸಂದರ್ಭದಲ್ಲಿ ವೈದ್ಯರು ಆಕೆಯ ಸಣ್ಣ ಕರುಳುಗಳನ್ನ ತೆಗೆದು ಹಾಕಿದ್ರು. ಇದರ ಪರಿಣಾಮ ಈಗ ಆಕೆ ಮತ್ತೆ ಆರೋಗ್ಯ ಮತ್ತೆ ಹದಗೆಟ್ಟಿದ್ದು, ಒಂದೂವರೆ ವರ್ಷದಿಂದ ಅನ್ನವನ್ನು ಸೆವಿಸುವುದನ್ನು ಬಿಟ್ಟಿದ್ದಾಳಂತೆ.
ಚೈತ್ರಾಳ ಆಸ್ಪತ್ರೆಗೆ ತಗಲುವ ವೆಚ್ಚ ಬರೋಬ್ಬರಿ 30 ಲಕ್ಷ ಆಗಿರುವುದರಿಂದ ಅಷ್ಟು ಹಣ ಭರಿಸಲು ಸಾಧ್ಯವಿಲ್ಲದ ಕಾರಣ ತನ್ನ ಆರಾಧ್ಯದೈವ ಸುದೀಪ್ ಮೊರೆ ಹೋಗಿದ್ದಾರೆ. ಇನ್ನು ಪ್ಲೀಸ್ ಎಲ್ಲಾ ಕಿಚ್ಚ ಸುದೀಪ್ ಅಣ್ಣನ ಅಭಿಮಾನಿಗಳು ಈ ವಿಡಿಯೋ ನೋಡಿ ಕಿಚ್ಚ ಸುದೀಪ್ ಅಣ್ಣನವರಿಗೆ ತಲುಪುವರಿಗೂ ಶೇರ್ ಮಾಡಿ ಅಂತ ಕೇಳಿಕೊಂಡಿದ್ದಾರೆ. ಸೋಶಿಯಲ್ ಮಿಡಿಯಾದಲ್ಲೂ ಈ ವಿಡಿಯೋ ವೈರಲ್ ಆಗಿದೆ.
