Asianet Suvarna News Asianet Suvarna News

ಖ್ಯಾತ ಬಾಲಿವುಡ್ ಕೊರಿಯಾಗ್ರಾಫರ್ ಸರೋಜ್ ಖಾನ್’ಗೆ ಕನ್ನಡದ ಮೇಲೆ ಅಭಿಮಾನ

ನಾನು ದುಬಾರಿಯಲ್ಲ. ವಿಮಾನ ಅಥವಾ ರೈಲು ಎರಡರಲ್ಲಿ ಯಾವುದು ಅನುಕೂಲವೋ ಅದಕ್ಕೆ ಖರ್ಚು ಮಾಡಲು ರೆಡಿ ಇದ್ರೆ ಸಾಕು,  ಮುಂಬೈನಿಂದ ಬೆಂಗಳೂರಿಗೆ ಬಂದು ನೃತ್ಯ ನಿರ್ದೇಶನ ಮಾಡಲು ನಾನ್ ರೆಡಿ...!’ - ಹೀಗೆ ಹೇಳಿದ್ದು ಬಾಲಿವುಡ್‌ನ ಹೆಸರಾಂತ ನೃತ್ಯ  ನಿರ್ದೇಶಕಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಸರೋಜ್ ಖಾನ್.

Famous Choreographer Saroj Khan Fan Of Kannada

ಬೆಂಗಳೂರು (ಮಾ. 22): ನಾನು ದುಬಾರಿಯಲ್ಲ. ವಿಮಾನ ಅಥವಾ ರೈಲು ಎರಡರಲ್ಲಿ ಯಾವುದು ಅನುಕೂಲವೋ ಅದಕ್ಕೆ ಖರ್ಚು ಮಾಡಲು ರೆಡಿ ಇದ್ರೆ ಸಾಕು,  ಮುಂಬೈನಿಂದ ಬೆಂಗಳೂರಿಗೆ ಬಂದು ನೃತ್ಯ ನಿರ್ದೇಶನ ಮಾಡಲು ನಾನ್ ರೆಡಿ...!’ - ಹೀಗೆ ಹೇಳಿದ್ದು ಬಾಲಿವುಡ್‌ನ ಹೆಸರಾಂತ ನೃತ್ಯ  ನಿರ್ದೇಶಕಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಸರೋಜ್ ಖಾನ್.

ಸಿನಿ ರಸಿಕರಿಗೆ ಈ ಹೆಸರು ಕೇಳಿದಾಕ್ಷಣ ತಟ್ಟಂತೆ  ನೆನಪಾಗೋದು ‘ತೇಜಾಬ್’ ಚಿತ್ರದ ಏಕ್ ದೋ  ತೀನ್.. , ‘ದೇವದಾಸ್’ ಚಿತ್ರದ ಡೋಲಾ ರೇ  ಡೋಲ, ‘ಬೇಟಾ’ ಚಿತ್ರದ ಧಕ್ ಧಕ್ ಕರನೆ ಲಗಾ  ಹಾಡುಗಳು. ಬಾಲಿವುಡ್‌ನಲ್ಲಿ ಇಂಥದ್ದೇ 2 ಸಾವಿರ  ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿ ಸೈ ಎನಿಸಿಕೊಂಡ  ಖ್ಯಾತಿ ಅವರದ್ದು. ಅವರಿಗೀಗ 70 ಇಳಿವಯಸ್ಸು. ಆದರೂ ಡಾನ್ಸ್ ಅಂದಾಕ್ಷಣ ಈಗಲೂ ಹದಿನೆಂಟರ ಪ್ರಾಯ
ಸರೋಜ್ ಖಾನ್.

70 ರಲ್ಲಿ ಕನ್ನಡಕ್ಕೆ ಬಂದ ಲೆಜೆಂಡ್  ಡಾನ್ಸ್ ಮೇಲಿನ ಅದೇ ಪ್ರೀತಿ, ಕಾಳಜಿ, ಭಕ್ತಿ ಅವರನ್ನು ಈ ಇಳಿವಯಸಲ್ಲೂ ಕನ್ನಡಕ್ಕೆ ಬರುವಂತೆ ಮಾಡಿದೆ.  ಮುರುಳಿಕೃಷ್ಣ ನಿರ್ದೇಶನದ ‘ಗರ’ ಚಿತ್ರದ ಎರಡು  ಹಾಡುಗಳಿಗೆ ಸರೋಜ್ ಖಾನ್ ನೃತ್ಯ ನಿರ್ದೇಶನ  ಮಾಡಿದ್ದಾರೆ. ಅದಕ್ಕಾಗಿಯೇ ಕೆಲವು ದಿನಗಳ ಹಿಂದೆ  ದೂರದ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದರು. ಮೇಲುಕೋಟೆ ದರ್ಶನವೇ ನನ್ನ ಸೌಭಾಗ್ಯ  ‘ಕನ್ನಡ ಅಂದ್ರೆ ನನಗೆ ತುಂಬಾ ಪ್ರೀತಿ. ಆ ಪ್ರೀತಿ ಹುಟ್ಟಿದ್ದು  ಇಲ್ಲಿನ ಹಲವರ ಸಂಪರ್ಕದ ಮೂಲಕ. ಆದರೂ ನಾನು ಇಲ್ಲಿಗೆ ಬಂದು ನೃತ್ಯ ನಿರ್ದೇಶನ ಮಾಡುವುದಕ್ಕೆ ಈ ತನಕ ಸಾಧ್ಯವಾಗಿರಲಿಲ್ಲ. ಆ ಕೊರಗು ಆಗಾಗ ನನ್ನನ್ನು ಕಾಡುತ್ತಲೇ
ಇತ್ತು. ಬಾಲಿವುಡ್‌ನಲ್ಲಿ ಅಷ್ಟೆಲ್ಲ ಹಿಟ್ ಹಾಡುಗಳಿಗೆ ನೃತ್ಯ  ನಿರ್ದೇಶನ ಮಾಡಿ ಸೈ ಎನಿಸಿಕೊಂಡಾಗಲೂ ಕನ್ನಡ  ಯಾಕಾಗಿ ನನ್ನನ್ನು ಕಾಡುತ್ತಿತ್ತೋ ಗೊತ್ತಿಲ್ಲ. ಅಂತೂ ಆ  ಅವಕಾಶ ‘ಗರ ’ಚಿತ್ರದ ಮೂಲಕ ಸಿಕ್ಕಿತು. ಅದಕ್ಕಾಗಿಯೇ  ಬೆಂಗಳೂರಿಗೆ ಬಂದು ಚಿತ್ರೀಕರಣಕ್ಕಾಗಿ ಮೇಲುಕೋಟೆಗೆ  ಹೋದಾಗ  ಚೆಲುವ ನಾರಾಯಣಸ್ವಾಮಿ ದೇವರ ದರ್ಶನ ಸಿಕ್ಕಿತು. ಅದು ನನ್ನ ಪಾಲಿನ ಅದೃಷ್ಟ ಎಂದೇ ಭಾವಿಸಿದ್ದೇನೆ. ಅಂತ ಮನದುಂಬಿ ಹೇಳಿಕೊಂಡರು ಸರೋಜ್ ಖಾನ್.

‘ಐಷಾರಾಮಿ ವ್ಯವಸ್ಥೆಯಂತೂ ಬೇಡವೇ ಬೇಡ. ವಿಮಾನ  ಅಥವಾ ರೈಲು ಎರಡರಲ್ಲಿ ಯಾವುದು ಅನುಕೂಲವೋ ಅದಕ್ಕೆ  ಖರ್ಚು ಮಾಡಲು ರೆಡಿ ಇದ್ರೆ ಸಾಕು, ಮುಂಬೈನಿಂದ ಬೆಂಗಳೂರಿಗೆ ಬಂದು ನೃತ್ಯ ನಿರ್ದೇಶನ ಮಾಡಲು ನಾನ್  ರೆಡಿ’ ಅಂತ ಕನ್ನಡದ ನಿರ್ದೇಶಕರಿಗೆ ಮನವಿ ಮಾಡಿಕೊಂಡರು  ಹೆಸರಾಂತ ನೃತ್ಯಗಾತಿ.ಕನ್ನಡದ ಜತೆಗಿನ ನಂಟು, ‘ಗರ’ ಚಿತ್ರದ ಚಿತ್ರೀಕರಣದ ಅನುಭವದ ಮಾತುಗಳ ನಡುವೆಯೇ ಅವರಿಗೆ ಎದುರಾಗಿದ್ದು ಬಾಲಿವುಡ್‌ನಲ್ಲಿ ನಿಮ್ಮ ನೆಚ್ಚಿನ ನಟಿ ಯಾರು  ಎನ್ನುವ ಪ್ರಶ್ನೆ. ‘ಒನ್ ಆ್ಯಂಡ್ ಓನ್ಲಿ ಮಾಧುರಿ’ ಎಂದು ನಗುತ್ತಲೇ ಉತ್ತರಿಸಿದರು.  

Follow Us:
Download App:
  • android
  • ios