ಸೋಷಿಯಲ್ ಮೀಡಿಯಾದಲ್ಲಿ ಫೇಸ್ ಆ್ಯಪ್ ಅಬ್ಬರ ಜೋರಾಗಿದೆ. ಎಲ್ಲರೂ ಫೇಸ್ ಆ್ಯಪ್ ಹಿಂದೆ ಬಿದ್ದಿದ್ದಾರೆ. ಫೇಸ್ ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ನಲ್ಲಿ ಈ ಆ್ಯಪ್ ಫೋಟೋಗಳೇ ತುಂಬಿವೆ. ಎಲ್ಲರಿಗೂ ತಾವೂ ವಯಸ್ಸಾದ ಮೇಲೆ ಹೇಗೆ ಕಾಣಿಸುತ್ತೇವೆ ಎಂಬ ಕುತೂಹಲ. 

ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಟ್ರೆಂಡ್ ಗಳಿಗೆ ಬೇಗ ಸ್ಪಂದಿಸುತ್ತಾರೆ. ಫೇಸ್ ಆ್ಯಪ್ ಗೆ ತಾವೂ ಏನೂ ಕಮ್ಮಿಯಿಲ್ಲ ಎಂಬಂತೆ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. 

 

 
 
 
 
 
 
 
 
 
 
 
 
 

#when @ektaravikapoor gets to you before the #faceappchallenge 😂#tbt

A post shared by Smriti Irani (@smritiiraniofficial) on Jul 17, 2019 at 7:40pm PDT

ಕ್ಯೂಕಿ ಸಾಸ್ ಭಿ ಕಭಿ ಬಹು ಥೀ ಸೀರಿಯಲ್ ನಲ್ಲಿ ಸ್ಮೃತಿ ಇರಾನಿ ತುಳಸಿ ವೀರಾನಿ ಪಾತ್ರ ಮಾಡಿದ್ದರು. ಇದು ಅವರಿಗೆ ಬಿಗ್ ಹಿಟ್ ತಂದು ಕೊಟ್ಟಿತ್ತು. ಬಹಳ ವರ್ಷವಾದ ಮೇಲೆ ಈ ಪಾತ್ರ ಹೇಗೆ ಕಾಣಿಸುತ್ತದೆಂಬ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. 

ಫೇಸ್ ಆ್ಯಪ್ ಚಾಲೆಂಜ್ ಗಿಂತ ಮುಂಚೆನೇ ಏಕ್ತಾ ಕಪೂರ್ ಇದನ್ನು ಮಾಡಿದ್ದರು ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಸ್ಮೃತಿ ಸೆನ್ ಆಫ್ ಹ್ಯೂಮರ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.