ಯೋಗರಾಜ್ ಭಟ್ ನಿರ್ದೇಶನದ ‘ಪಂಚತಂತ್ರ’ ಚಿತ್ರದ ‘ಶೃಂಗಾರದ ಹೊಂಗೆ ಮರ’ ಹಾಡು ಲಾಂಚ್ ಆದ ನಂತರವಂತೂ ಪಡ್ಡೆ ಹುಡುಗರ ನೆಚ್ಚಿನ ನಟಿ ಆಗಿದ್ದಾರೆ ನಟಿ ಸೋನಲ್ ಮೊಂತೆರೋ. ಚಿತ್ರರಂಗಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಮುಗ್ಧ ಹುಡುಗಿ, ಪಕ್ಕದ್ಮನೆ ಹುಡುಗಿ ಇಮೇಜ್ ಹೊಂದಿದ್ದ ಈ ಹುಡುಗಿ ಈಗ ಭಟ್ರ ಕೈಗೆ ಸಿಕ್ಕಿ ಸಖತ್ ನಾಟಿ ಎನಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಈ ಚಿತ್ರದಲ್ಲಿ ಅವರ ಪಾತ್ರ. ಬೋಲ್ಡ್ ಪಾತ್ರಗಳೇ ಬೇಡ ಎನ್ನುತ್ತಿದ್ದ ಸೋನಲ್ ಈ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಹೇಗೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಆರಂಭದಲ್ಲಿ ನನಗೆ ಇದ್ದಿದ್ದು ಮುಗ್ಧ ಹುಡುಗಿಯ ಪಾತ್ರಗಳೇ ಸಾಕು ಅಂತ. ಮನೆಯವರು, ಆಪ್ತರು ಕೂಡ ಅಂತಹ ಪಾತ್ರಗಳೇ ನಿನಗೆ ಸೂಕ್ತ ಅಂತಲೂ ಹೇಳುತ್ತಿದ್ದರು. ಅದೇ ನನ್ನ ತಲೆಯಲ್ಲೇ ಉಳಿದು ಒಂದಷ್ಟು ಸಿನಿಮಾಗಳಲ್ಲಿ ಅಂಥದ್ದೇ ಪಾತ್ರಕ್ಕೆ ಬಣ್ಣ ಹಚ್ಚಿದೆ. ಆದರೆ ನಟಿಯಾಗಿ ನಾನ್ಯಾಕೆ ಹೊಸ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬಾರದು\ ಅಂತಂದುಕೊಳ್ಳುತ್ತಿದ್ದಾಗ ಯೋಗರಾಜ್ ಭಟ್ಟರ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ತು. ಆರಂಭದಲ್ಲಿ ಅವರು ನನ್ನ ಪಾತ್ರದ ಒನ್‌ಲೈನ್ ಸ್ಟೋರಿ ಮಾತ್ರ ಹೇಳಿದ್ದರು. ಒಂದು ಕಾಲೇಜ್ ಹುಡುಗಿ ಪಾತ್ರ. ಆಕೆ ತುಂಬಾ ನಾಟಿ. ಹಾಗೆಯೇ ಮುಗ್ಧೆ. ಅವೆರಡರ ಮಿಕ್ಸರ್ ಆ ಪಾತ್ರದ ವ್ಯಕ್ತಿತ್ವ ಎಂದಷ್ಟೇ ಹೇಳಿದ್ದರು. ಆ ಪಾತ್ರ ಕುತೂಹಲ ಹುಟ್ಟಿಸಿತು. ಹಾಗಾಗಿ ಅಭಿನಯಿಸಲು ಒಪ್ಪಿಕೊಂಡೆ.

ಮಾರ್ಚ್ ಮಾಸಾಂತ್ಯಕ್ಕೆ ಪಂಚತಂತ್ರ ಬಿಡುಗಡೆ!

ಪಾತ್ರಕ್ಕೆ ತಕ್ಕಂತೆ ಬೋಲ್ಡ್ ಆಗಿ ಕಾಣಿಸಿಕೊಂಡರೆ ಈ ಅಭಿಪ್ರಾಯಗಳು ಸಹಜ. ಶೃಂಗಾರದ ಹೊಂಗೆ ಮರ ಹಾಡು ಲಾಂಚ್ ಆದ ನಂತರ ಸೋಷಲ್ ಮೀಡಿಯಾದಲ್ಲಿ ನನಗೆ ಸಾಕಷ್ಟು ಕಮೆಂಟ್ಸ್ ಬಂದಿವೆ. ಅದರಲ್ಲಿ ನೆಗೆಟಿವ್, ಪಾಸಿಟಿವ್ ಎಲ್ಲವೂ ಇವೆ. ಇದೆಲ್ಲ ನೋಡಿಕೊಂಡು ಅಭಿನಯಿಸಲು ಆಗದು. ಬಹುಪಾಲು ಜನರಿಗೆ ಆ ಪಾತ್ರ ಹಿಡಿಸುತ್ತೆ ಅಂದ್ರೆ ಬೋಲ್ಡ್ ಪಾತ್ರ ಯಾಕೆ ಮಾಡಬಾರದು? ಅದು ಒಂದು ಪಾತ್ರವಷ್ಟೇ, ನಮ್ಮ ವ್ಯಕ್ತಿತ್ವವಲ್ಲ. ಇಷ್ಚಕ್ಕೂ ಪಾತ್ರದಲ್ಲಿ ಬರೀ ನಾಟಿನೆಸ್ ಮಾತ್ರವಿಲ್ಲ, ಮುಗ್ಧತೆಯೂ ಇದೆ. ಅದರ ಸೃಷ್ಟಿಯೇ ಅದ್ಭುತವಾಗಿದೆ. ಚಿತ್ರ ನೋಡಿದವರಿಗೆ ಆ ಪಾತ್ರದ ವಾಸ್ತವ ಗೊತ್ತಾಗಲಿದೆ.