ನಿಮಗೂ ರಘು ಅವರಿಗೂ ಪರಿಚಯವಾಗಿದ್ದು ಹೇಗೆ?

ನಾವಿಬ್ಬರು 'ಮಿ. ಆ್ಯಂಡ್ ಮಿಸಸ್ ರಾಮೇಗೌಡ' ಮೂಲಕವೇ ಕಿರುತೆರೆ ಪ್ರವೇಶಿಸಿದ್ದು. ಆನ್‌ಸ್ಕ್ರೀನ್‌ನಲ್ಲಿ ಸೂಪರ್ ಜೋಡಿಯಾದ ನಾವು ಆಫ್ ಸ್ಕ್ರೀನ್‌ನಲ್ಲಿ ಮಾತನಾಡಿದ್ದು ಕಡಿಮೆ. ಅದರಲ್ಲೂ ನಾವಿಬ್ಬರೂ ಒಟ್ಟಾಗಿ ಇರ್ತಿವಿ ಅಂತ ಸುದ್ದಿ ಹರಿದಾಡುತ್ತಲೇ ಇತ್ತು. ಆದರೆ, ನಮ್ಮಿಬ್ಬರ ನಡುವೆ ಅಂಥದ್ದೊಂದು ಬಾಂಧವ್ಯ ನಿಜವಾಗಲೂ ಆರಂಭವಾಗಿದ್ದು ಈ ಸೀರಿಯಲ್ ಮುಗಿದ ನಂತರವೇ. 

ಎಷ್ಟು ವರ್ಷದಿಂದ ಲವ್‌ ಮಾಡ್ತಾ ಇದ್ದೀರಾ?

ಲವ್ ಅಂತ ಶುರುವಾಗಿದ್ದು ಗೊತ್ತೇ ಆಗ್ಲಿಲ್ಲ. ನಾವು ಹಲವು ವರ್ಷಗಳ ಕಾಲ ತುಂಬಾ ಒಳ್ಳೆ ಫ್ರೆಂಡ್ಸ್ ಆಗಿದ್ವಿ. ಆ ನಂತರ ಇಬ್ಬರ ಮನೆಯಲ್ಲೂ ಮದ್ವೆ ವಯಸ್ಸು ಅಂತು ಶುರು ಮಾಡಿದ್ರು ...so'known devil is better than unknown angel' ಅಂತ ಒಬ್ಬರಿಗೊಬ್ಬರು ಸ್ವಲ್ಪ ಟೈಂ ಕೊಟ್ವಿ. ನಂತರ ಮದುವೆ ಆಗಲು ನಿರ್ಧರಿಸಿದ್ವಿ.

ಯಾವಾಗ ಮದುವೆ ಆಗ್ತಾ ಇದೀರಾ? ಹೇಗೆ ಮದುವೆ ಆಗಬೇಕು ಅಂದ್ಕೊಂಡಿದೀರಾ?

ಮೇ ತಿಂಗಳಲ್ಲಿ ಮದುವೆ ಅಂತ ಅಂದುಕೊಂಡಿದೀವಿ. ಯಾವ ರೀತಿ ಅಂತೆಲ್ಲಾ ಇನ್ನೂ ನಾವಿಬ್ಬರು ಮಾತನಾಡಿಲ್ಲ. ಬಟ್ ಇಬ್ಬರಿಗೂ ಸಿಂಪಲ್ ಮದುವೆ ತುಂಬಾ ಇಷ್ಟ. ಅದರಲ್ಲೂ ನನಗೆ ತಂದೆ-ತಾಯಿ ಕಷ್ಟ ಪಟ್ಟು ದುಡಿದ ಹಣದ ಬಗ್ಗೆ ಗೌರವವಿದೆ. ಕುಟುಂಬದಲ್ಲೇ ನಾನು ಕೊನೆಯ, 25ನೇ ಮೊಮ್ಮಗಳು. ಸ್ವಲ್ಪ ಮುದ್ದಿನಿಂದ ಬೆಳಿಸಿದ್ದಾರೆ. ಸಣ್ಣ ಪುಟ್ಟ ಕಾರ್ಯಕ್ರಮಗಳಿಗೇ 100ಕ್ಕೂ ಹೆಚ್ಚು ಜನರು ಸೇರುತ್ತೇವೆ. ಇನ್ನು ಮದುವೆಯೂ ಜೋರಾಗಿಯೇ ಇರುತ್ತೆ. 

ನಿಮ್ಮಿಬ್ಬರ ಮನೆಯಲ್ಲಿ ಮದುವೆಗೆ ಆರಾಮಾಗಿ ಒಪ್ಪಿದ್ರಾ?

ನನ್ನ ತಂದೆಯನ್ನು ಒಪ್ಪಿಸುವುದು ಮುಖ್ಯವಾಗಿತ್ತು ನನಗೆ. ನನ್ನ ತಾಯಿಗೆ ಯಾವುದೇ ಅಭ್ಯಂತರವೂ ಇರಲಿಲ್ಲ. ದೊಡ್ಡ ಕುಟುಂಬವಾದ ಕಾರಣ ನಮಿಬ್ಬರ ಬಗ್ಗೆ ಎಲ್ಲರೂ ಒಪ್ಪಿಕೊಳ್ಳಬೇಕಾಗಿತ್ತು.

ನಿಮಗೆ ರಘು ಅವರ ಯಾವ ಗುಣ ತುಂಬಾ ಇಷ್ಟ?

ಅವರು ಸಿಕ್ಕಾಪಟ್ಟೆ ಡೌನ್‌ ಟು ಆರ್ಥ್. ಎಲ್ಲರಿಗೂ ಅವರ ಈ ಗುಣ ಇಷ್ಟವಾಗುತ್ತದೆ. ನಾವಿಬ್ಬರೂ ತುಂಬಾ ಟ್ರಾನ್ಪರೆಂಟ್. ಯಾವ ವಿಚಾರವನ್ನೂ ಇಬ್ಬರೂ ಮುಚ್ಚಿಟ್ಟುಕೊಳ್ಳುವುದಿಲ್ಲ. ನಂಬಿಕೆಯೇ ಇಬ್ಬರ ಬಾಂಧವ್ಯ  ಗಟ್ಟಿಯಾಗಲು ಮುಖ್ಯ ಕಾರಣ. 

ಇಬ್ಬರೂ ಒಟ್ಟಿಗೆ ನೋಡಿದ ಮೂವಿ ಯಾವುದು? ತುಂಬಾ ಇಷ್ಟವಾಗಿದ್ದು ಯಾವ ಫಿಲ್ಮ್?

ಹೂಂ...ಸದ್ಯಕ್ಕೆ ಜ್ಞಾಪಕಕ್ಕೆ ಬರುತ್ತಿಲ್ಲ. ಆದರೆ ನಾವಿಬ್ಬರೂ ಸಿನಿ ಪ್ರೇಮಿಗಳು. ತುಂಬಾ ನೋಡ್ತಿವಿ. ಆದರೆ ಬ್ಯೂಸಿ ಶೆಡ್ಯೂ‌ಲ್‌ನಲ್ಲಿದ್ದಾಗ ಆಗೋದಿಲ್ಲ. ಕೆಲವೊಮ್ಮೆ ರಘು ಅವರ ಫ್ರೆಂಡ್ಸ್ ಜೊತೆ ಹೋದರೆ, ನಾನು ನನ್ನ ಫ್ರೆಂಡ್ಸ್ ಜತೆ ಹೋಗುತ್ತೇನೆ. 

ನೀವು ಎಂಗೇಜ್‌ ಆದಾಗಿನಿಂದ ಇಲ್ಲಿಯವರೆಗೂ ಮೆಮೋರೆಬಲ್ ಮುಮೆಂಟ್ ಅಂತ ನೆನಪಿಸ್ಕೊಳೋದಾದ್ರೆ...?

ನಮ್ಮ ಎಂಗೇಜ್‌ಮೆಂಟೇ ನನಗೆ ತುಂಬಾ ಮೆಮೋರೆಬಲ್. ಅದಕ್ಕೆ ಎಷ್ಟು ದಿನ ಕಾದಿದ್ದೇನೆ ಗೊತ್ತಾ? (ನಗು...)

ನಿಮ್ಮಿಬ್ಬರ ಜೋಡಿ ನೋಡಿದಾಗ ಅಮಿತಾಬ್‌- ಜಯಾ ಬಚ್ಚನ್‌ ಜೋಡಿ ನೋಡಿದಂಗೆ ಅನ್ಸುತ್ತಲ್ಲ...?

ಹೌದು.... ತುಂಬಾ ಜನ ಇದರ ಬಗ್ಗೆ ನಮಗೆ ಹೇಳಿದ್ದಾರೆ. ನೀನು ಸ್ವಲ್ಪ ಹೈಟ್ ಇರ್ಬೇಕಿತ್ತು ಅಂತ. ಬಟ್ ಇದಕ್ಕೆ ರಘು 'ಹೈಟ್‌ಗಿಂತ ಹಾರ್ಟ್ ಮುಖ್ಯ...' ಎಂದು ಹೇಳುತ್ತಿರುತ್ತಾರೆ.

ಸಪ್ತಪದಿ ತುಳಿಯಲಿದೆ ಈ ಕಿರುತೆರೆ ಜೋಡಿ!

ನಿಮ್ಮ ಅಭಿಮಾನಿಗಳಿಗೆ ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಇಷ್ಟ. ರಘು ಹೇಗೆ ಇಷ್ಟ ಪಡುತ್ತಾರೆ?

ನಾನು ಔಟ್ ಡೇಟೆಡ್ ಎಂದು ನನಗನ್ನಿಸುತ್ತದೆ. ನನ್ನ ಬಹುತೇಕ ಡ್ರೆಸ್‌ಗಳನ್ನು ನನ್ನಮ್ಮನೇ ಸೆಲೆಕ್ಟ್ ಮಾಡುವುದು. ರಘು ಅವರಿಗೆ ನಾನು ತುಂಬಾ ಸಿಂಪಲ್‌ ಆಗಿದ್ದರೆ ಇಷ್ಟ. ಅದು ಹಾಕ್ಕೋ, ಇದು ಹಾಕ್ಕೋ ಎಂದೇನೂ ಹೇಳುವುದಿಲ್ಲ. 

ಸೀರಿಯಲ್‌ ಮಾಡುವುದಕ್ಕೂ ಮುನ್ನ ರಘುಗೆ ನಿಮ್ಮ ಪರಿಚಯವಿತ್ತಾ?   

ಅವರಿಗಿಂತ ನಾನು ಆ್ಯಕ್ಟಿಂಗ್‌ನಲ್ಲಿ ಸೀನಿಯರ್ (ನಗುತ್ತಾ...). ಆದ್ರೆ ನಾವಿಬ್ಬರೂ ಓದಿದ್ದು ವಿಜಯಾ ಕಾಲೇಜಿನಲ್ಲಿಯೇ. ಆದರೆ, ಅವರು ಬಿ.ಕಾಂ ನಾನು ಬಿ.ಎ. ಜರ್ನಲಿಸಮ್. ಬಟ್ ಅವರಿಗೆ ನಾನು ಗೊತ್ತಾಗಿದ್ದು ಮೇಘಾ ಮಯೂರಿ ಸೀರಿಯಲ್‌ನಲ್ಲಿ ಮಾಡಿದ ಪಾತ್ರದ ಮೂಲಕವೇ. 

ಇಬ್ಬರಿಗೂ ಫಿಲ್ಮ್ ಮಾಡುವ ಅವಕಾಶ ಸಿಕ್ಕರೆ?

ಖಂಡಿತವಾಗಲೂ ಮಾಡುತ್ತೇವೆ.

ಇಬ್ಬರೂ ಧಾರವಾಹಿ ಅಥವಾ ಸಿನಿಮಾ ಮಾಡುವ ಮುನ್ನ ಒಬ್ಬರಿಗೊಬ್ಬರು ಡಿಸ್ಕಸ್ ಮಾಡುತ್ತೀರಾ?

ಹೌದು....ನಾನು ಮೊದಲು ಕೇಳುವುದು ನನ್ನ ಅಮ್ಮ ಹಾಗೂ ರಘು ಅಭಿಪ್ರಾಯವನ್ನು. ನನ್ನ ತಂದೆಗೆ ನಾನು ಏನು ಮಾಡಿದರೂ ತೊಂದರೆ ಇಲ್ಲ. ನಾನು ಈ ಫೀಲ್ಡ್ ಶುರು ಮಾಡುವ ಮುನ್ನ ನನ್ನ ತಂದೆಗೆ ಯಾವ ತಪ್ಪೂ ಮಾಡುವುದಿಲ್ಲವೆಂದು ಮಾತು ಕೊಟ್ಟಿದ್ದೇನೆ. ಅದಕ್ಕೆ ಬದ್ಧಳಾಗಿದ್ದೇನೆ.