ಕತ್ರಿನಾ, ಜಾಕ್ವಲಿನ್ ಕಾದಾಟದ ಗುಸುಗುಸುಜಾಕ್ವಲಿನ್ ವಿಡಿಯೋ ಹೇಳುವುದೇ ಬೇರೆಕತ್ರಿನಾ , ಜಾಕ್ವಲಿನ್ ಒಂದೇ ವಿಮಾನದಲ್ಲಿಎಲ್ಲವೂ ಸರಿಯಿದೆ ಎಂಬ ಸಂದೇಶ ರವಾನೆ

ಮುಂಬೈ(ಜೂ.30): ಬಾಲಿವುಡ್ ನಟಿಯರಾದ ಕತ್ರಿನಾ ಕೈಫ್ ಮತ್ತು ಜಾಕ್ವಲಿನ್ ಫರ್ನಾಂಡೀಸ್ ನಡುವೆ ಜಗಳ ನಡೆದಿದೆ ಎಂಬ ಗುಸುಗುಸು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿತ್ತು. ಸಲ್ಮಾನ್ ಖಾನ್ ಅಭಿನಯದ ದಬಂಗ್ ಸರಣಿಯ ಮುಂದಿನ ಚಿತ್ರದಲ್ಲಿ ಇಬ್ಬರೂ ನಟಿಸುತ್ತಿದ್ದು, ಈ ಮಧ್ಯೆ ಕತ್ರಿನಾ, ಜಾಕ್ವಲಿನ್ ನಡುವೆ ಸಂಬಂಧ ಸರಿಯಿಲ್ಲ ಎಂದು ಹೇಳಲಾಗುತ್ತಿತ್ತು.

View post on Instagram

ಆದರೆ ಜಾಕ್ವಲಿನ್ ತಮ್ಮ ಇನ್ಸಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋವೊಂದು ಈ ಎಲ್ಲ ಗಾಸಿಪ್ ಗಳಿಗೆ ತೆರೆ ಎಳೆದಿದೆ. ಹೌದು, ದಬಂಗ್ ಚಿತ್ರದ ಶೂಟಿಂಗ್ ಗಾಗಿ ಕತ್ರಿನಾ, ಜಾಕ್ವಲಿನ್ ಮತ್ತು ಸೋನಾಕ್ಷಿ ಸಿನ್ಹಾ ಒಟ್ಟಿಗೆ ಚಾರ್ಟೆಡ್ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ.

View post on Instagram

ವಿಮಾನದಲ್ಲಿ ವಿಡಿಯೋ ಮಾಡಿರುವ ಜಾಕ್ವಲಿನ್, ಕತ್ರಿನಾ ಹಾಗೂ ಸೋನಾಕ್ಷಿ ಜೊತೆ ಮಜವಾಗಿ ಕಾಲ ಕಳೆಯುತ್ತಿರುವುದಾಗಿ ಹೇಳಿದ್ದಾರೆ. ಈ ಮೂಲಕ ತಮ್ಮ ನಡುವೆ ಎಲ್ಲವೂ ಸರಿಯಿದೆ ಎಂಬ ಸಂದೇಶವನ್ನು ಜಾಕ್ವಲಿನ್ ಕಳುಹಿಸಿದ್ದಾರೆ.