ನಾಲ್ಕು ವರ್ಷದಿಂದ ಒತ್ತಡದಲ್ಲೇ ಜೀವನ ಸಾಗಿಸಿದ್ದೇನೆ. ತುಂಬಾ‌ ದುಃಖದಿಂದ‌ ಸಿನಿಮಾವನ್ನು ಹಿಂಪಡೆಯುತ್ತಿದ್ದೇನೆ. ಈ ಕುರಿತು ನಾಳೆ ವಾಣಿಜ್ಯ ಮಂಡಳಿಯಲ್ಲಿ ಸಭೆ ಇದೆ. ಸಭೆಯ ನಂತರ ಸಿನಿಮಾ ಬಿಡುಗಡೆಗೆ ನಿರ್ಧಾರ ಮಾಡುತ್ತೇವೆ'
ಬೆಂಗಳೂರು(ಮಾ.07): ಕಳೆದೆರಡು ದಿನಗಳಿಂದ ದರ್ಶನ್ ಹಾಗೂ ಸುದೀಪ್ ಟ್ವಿಟರ್ ವಿವಾದ ಗಾಂಧಿನಗರದಾದ್ಯಂತ ಸುದ್ದಿಯಾಗಿದೆ. ನಮ್ಮಿಬ್ಬರ ಸ್ನೇಹ ಮುಗಿದ ಅಧ್ಯಾಯ ಎಂದು ದರ್ಶನ್ ಹೇಳಿದ ನಂತರ ಸುದೀಪ್ ಯಾವುದೇ ಹೇಳಿಕೆಯನ್ನು ನೀಡದೆ ಅಂತರವನ್ನು ಕಾಯ್ದುಕೊಂಡಿದ್ದರು.
ಈಗ ಮತ್ತೊಂದು ಜಗಳ ಶುರುವಾಗಿದ್ದು, ಅದು ನಿರ್ಮಾಪಕ ಹಾಗೂ ನಿರ್ದೇಶಕರ ನಡುವೆ. ಮಠ ಹಾಗೂ ಎದ್ದೇಳು ಮಂಜುನಾಥ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಹಾಗೂ ನಿರ್ಮಾಪಕ ಯೋಗಿಶ್ ನಾರಾಯಣ್ ನಡುವೆ. ಗುರುಪ್ರಸಾದ್ ನಿರ್ದೇಶನದ 'ಎರಡನೇ ಸಲ' ಚಿತ್ರವನ್ನು ಯೋಗೀಶ್ ನಾರಾಯಣ್ ನಿರ್ಮಿಸಿದ್ದರು.
ಇಬ್ಬರ ನಡುವೆ ಮನಸ್ಥಾಪ ಉಂಟಾಗಿರುವ ಕಾರಣ ನಿರ್ಮಾಪಕ ಯೋಗೀಶ್ ನಾರಾಯಣ್ ರಾಜ್ಯದಾದ್ಯಂತ ಪ್ರದರ್ಶನವಾಗುತ್ತಿರುವ 'ಎರಡನೆ ಸಲ' ಚಿತ್ರದ ಪ್ರದರ್ಶನವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ. ಮಾರ್ಚ್ 3ರಂದು ರಾಜ್ಯದಾದ್ಯಂತ ಚಿತ್ರ ಬಿಡುಗಡೆಯಾಗಿತ್ತು.
'ಗುರುಪ್ರಸಾದ್ ಯಾವುತ್ತಿಗೂ ಎರಡನೆ ಸಲ ಚಿತ್ರದ ನಿರ್ಮಾಪಕರಲ್ಲ. ಅವರಿಂದ ಸಿನಿಮಾ ಅರ್ಧ ಸತ್ತಿದೆ. ಮಾರ್ಚ್ 3ರಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಿತ್ತು. ನಿರ್ದೇಶಕ ಗುರುಪ್ರಸಾದ್ ಪ್ರಚಾರಕ್ಕೆ ಬಂದಿರಲಿಲ್ಲ. ನಾಲ್ಕು ವರ್ಷದಿಂದ ಒತ್ತಡದಲ್ಲೇ ಜೀವನ ಸಾಗಿಸಿದ್ದೇನೆ. ತುಂಬಾ ದುಃಖದಿಂದ ಸಿನಿಮಾವನ್ನು ಹಿಂಪಡೆಯುತ್ತಿದ್ದೇನೆ. ಈ ಕುರಿತು ನಾಳೆ ವಾಣಿಜ್ಯ ಮಂಡಳಿಯಲ್ಲಿ ಸಭೆ ಇದೆ. ಸಭೆಯ ನಂತರ ಸಿನಿಮಾ ಬಿಡುಗಡೆಗೆ ನಿರ್ಧಾರ ಮಾಡುತ್ತೇವೆ' ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಟ ಧನಂಜಯ, ನಟಿ ಸಂಗೀತ ಭಟ್ ಉಪಸ್ಥಿತರಿದ್ದರು.

