11
ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಸದ್ಯ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಒಂದನ್ನ ಕೊಟ್ಟಿದ್ದಾರೆ. ಇವರು ಮದುವೆ ಆಗಿದ್ದಾರೆ ಅನ್ನೋ ಗಾಳಿ ಸುದ್ದಿ ಹರಿದಾಡುತ್ತಿದೆ. ಇವರು ಬಹುದಿನಗಳಿಂದ ಲಂಡನ್ ಮೂಲದ ನಟ ಮೈಕಲ್ ಕೊರ್ಸೆಲ್ ಜೊತೆ ಡೇಟಿಂಗ್ ನಲ್ಲಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ. ಶೃತಿ ಹಾಸನ್, ತಾಯಿ ಸಾರಿಕಾ ಹಾಗೂ ಮೈಖೆಲ್ ಕೊರ್ಸೆಲ್ ಮೂವರೂ ಜೊತೆಗಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಿಂದೆ ಕಮಲ್ ಹಾಸನ್ ಅವರನ್ನೂ ಕೂಡ ಮೈಖೆಲ್ ಭೇಟಿಯಾಗಿದ್ದರು. ಶೃತಿ ಹಾಗೂ ಮೈಖೆಲ್ ಸಾಕಷ್ಟು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಇವರ ಫೋಟೋ ಗಳನ್ನು ನೋಡಿದ ಶೃತಿ ಹಾಸನ್ ಅಭಿಮಾನಿಗಳಿಗೆ ಕುತೂಹಲ ಮೂಡಿದೆ. ಕನ್ನಡದ ಪೊಗರು ಸಿನಿಮಾದಲ್ಲಿ ನಾನು ನಟಿಸುತ್ತಿಲ್ಲ ಅಂತ ತಮ್ಮ ಟ್ವಿಟ್ಟರ್'ನಲ್ಲಿ ಟ್ವೀಟ್ ಮಾಡಿದ್ದ ಶೃತಿ, ತಮ್ಮ ಬಾಯ್ ಫ್ರೇಂಡ್ ಮೈಖೆಲ್ ಬಗ್ಗೆ ಆಗಲಿ, ಮದುವೆ ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಇದಕ್ಕೂ ಟ್ವಿಟ್ಟ'ರ್'ನಲ್ಲಿ ಉತ್ತರ ಕೊಡುತ್ತಾರೋ ನೋಡಬೇಕು.
