Asianet Suvarna News Asianet Suvarna News

ಇಂದು ನಟ ಲೂಸ್ ಮಾದ ಯೋಗಿ, ಸಾಹಿತ್ಯ ನಿಶ್ಚಿತಾರ್ಥ

ಕನ್ನಡದ ನಟ ಲೂಸ್ ಮಾದ ಯೋಗಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಯೋಗಿ, ಮನ ಮೆಚ್ಚಿದ ಹುಡುಗಿಯನ್ನು ಕೈ ಹಿಡಿಯಲಿದ್ದಾರೆ.

Engagement Of Yogi and Sahitya
  • Facebook
  • Twitter
  • Whatsapp

ಬೆಂಗಳೂರು(ಜೂ.11): ಕನ್ನಡದ ನಟ ಲೂಸ್ ಮಾದ ಯೋಗಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಯೋಗಿ, ಮನ ಮೆಚ್ಚಿದ ಹುಡುಗಿಯನ್ನು ಕೈ ಹಿಡಿಯಲಿದ್ದಾರೆ.

ತಮ್ಮ ಸ್ಟೈಲೀಶ್ ಅಭನಯದ ಮೂಲಕವೇ ಗುರುತಿಸಿಕೊಂಡ ಯೋಗಿ ತಮ್ಮ ಬಹುಕಾಲದ ಗೆಳತಿ ಸಾಹಿತ್ಯ ಅರಸ್ ಜೊತೆ  ಇಂದು ನಿಶ್ಚತಾರ್ಥ ಮಾಡಿಕೊಳ್ಳಲಿದ್ದಾರೆ. ಯಡಿಯೂರ್ ಲೇಕ್'ನಲ್ಲಿರುವ ಸಾಹಿತ್ಯ ನಿವಾಸದಲ್ಲಿ   ಸುಮಾರು 11 ಗಂಟೆ ಶುಭಗಳಿಗೆಯಲ್ಲಿ ಯೋಗಿ ಸಾಹಿತ್ಯ ಕುಟುಂಬದವರು ಹಾಗೂ ಆಪ್ತರ  ಸಮ್ಮುಖದಲ್ಲಿ ಯೋಗಿ, ಸಾಹಿತ್ಯ ಉಂಗುರ ತೊಡಿಸುವ ಮೂಲಕ ನಿಶ್ಚಿತಾರ್ಥ ಶಾಸ್ತ್ರ ಮುಗಿಸಲಿದ್ದಾರೆ.

ಇನ್ನು ನವೆಂಬರ್ 2 ರಂದು ಮದುವೆ ಡೇಟ್ ಫಿಕ್ಸ್ ಆಗಿದ್ದು. ಚಿತ್ರರಂಗದ ಕಲಾವಿದರು, ಅಭಿಮಾನಿಗಳು ಆಪ್ತರ ಸಮ್ಮುಖದಲ್ಲಿ ಯೋಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

Follow Us:
Download App:
  • android
  • ios