ಅಪ್ಪನ ಜೊತೆ ’ಕುಸ್ತಿ’ಗಿಳಿದ ಮಗ: ವಿಡಿಯೋ

Duniya Vijay's son acting in his new movie
Highlights

ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್‌ ಪುತ್ರ ಸಾಮ್ರಾಟ್ ವಿಜಯ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಹೌದು, ವಿಜಯ್ ಅವರ ಹೊಸ ಸಿನಿಮಾ ಕುಸ್ತಿಯಲ್ಲಿ ಸಾಮ್ರಾಟ್ ಮರಿ ಪೈಲ್ವಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕಾಗಿಯೇ ವಿಶೇಷವಾಗಿ ಉತ್ತರ ಕರ್ನಾಟಕದಿಂದ ಪೈಲ್ವಾರನ್ನು ಕರೆಸಲಾಗಿದೆ ಎನ್ನಲಾಗಿದೆ.

ಬೆಂಗಳೂರು (ಮೇ. 23): ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್‌ ಪುತ್ರ ಸಾಮ್ರಾಟ್ ವಿಜಯ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಹೌದು, ವಿಜಯ್ ಅವರ ಹೊಸ ಸಿನಿಮಾ ಕುಸ್ತಿಯಲ್ಲಿ ಸಾಮ್ರಾಟ್ ಮರಿ ಪೈಲ್ವಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕಾಗಿಯೇ ವಿಶೇಷವಾಗಿ ಉತ್ತರ ಕರ್ನಾಟಕದಿಂದ ಪೈಲ್ವಾರನ್ನು ಕರೆಸಲಾಗಿದೆ ಎನ್ನಲಾಗಿದೆ.

ಅನಿಲ್‌ ಮಂಡ್ಯ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ಸಿನಿಮಾ ಗ್ರಾಮೀಣ ಮಟ್ಟಿ ಕುಸ್ತಿಯನ್ನು ಆಧರಿಸಿದೆ ಎಂದು ಅನಿಲ್ ಹೇಳಿದ್ದಾರೆ. ಈ ಪಾತ್ರಕ್ಕೆ ವಿಜಯ್ ಹೇಳಿ ಮಾಡಿಸಿದ ನಟರಾಗಿದ್ದು, ಪುತ್ರ ಸಾಮ್ರಾಟ್ ಕೂಡ ಅಪ್ಪನ ಹಾಗೆ ಶಿಸ್ತನ್ನು ಮೈಗೂಡಿಸಿಕೊಂಡಿದ್ದಾರೆ ಎಂದು ಅನಿಲ್ ಸಂತಸ ವ್ಯಕ್ತಪಡಿಸಿದ್ದಾರೆ.  ಚಿತ್ರದಲ್ಲಿ ವಿಜಯ್‌ ಪುತ್ರ ಸಾಮ್ರಾಟ್‌ ಮರಿ ಪೈಲ್ವಾನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಚಿತ್ರದ ಕಥೆಯನ್ನು ಸ್ವತಃ ದುನಿಯಾ ವಿಜಯ್‌ ಬರೆದಿದ್ದು, ಅದಕ್ಕಾಗಿ ಪ್ರಖ್ಯಾತ ಕುಸ್ತಿ ಪಟುಗಳಿಂದಲೇ ಮಾಹಿತಿ ಸಂಗ್ರಹಿಸಿ ಸಾಕಾಷ್ಟು ತಯಾರಿ ನಡೆಸುತ್ತಿದ್ದಾರೆ. ಇದೀಗ ಸಿನಿಮಾ ಆರಂಭಕ್ಕೂ ಮೊದಲೇ ಪಾತ್ರಕ್ಕಾಗಿ ಮಗ ಸಾಮ್ರಾಟ್ ನಡೆಸುತ್ತಿರುವ ತಯಾರಿಯ ವಿಡಿಯೋ ರಿಲೀಸ್ ಮಾಡಿ ಎಲ್ಲರ ಕುತೂಹಲ ಹೆಚ್ಚಿಸಿದ್ದಾರೆ.

loader