ಹೊಸ ವರ್ಷದ ಸಂಭ್ರಮಕ್ಕೆ ಕಾಲಿಡುವ ಮುನ್ನವೇ ಗಾಂಧಿನಗರದಲ್ಲಿ ಚಿತ್ರವೊಂದರ ಹಾಡಿನ ಕಿಕ್ಕು ಬಲು ಜೋರಾಗಿ ಶುರುವಾಯಿತು. ನೂತನ ವರ್ಷವನ್ನು ಸ್ವಾಗತಿಸುವ ನೆಪದಲ್ಲಿ ವರ್ಷದ  ಕೊನೆಯ ನಡುರಾತ್ರಿಯಲ್ಲಿ ಕಿಕ್ಕು ಏರಿಸಿಕೊಳ್ಳುವಂತೆ ಈ ಹಾಡು ಸಿಕ್ಕಾಪಟ್ಟೆ ಮತ್ತೇರಿಸುತ್ತಿದೆ.

ಬೆಂಗಳೂರು (ಜ.05): ಹೊಸ ವರ್ಷದ ಸಂಭ್ರಮಕ್ಕೆ ಕಾಲಿಡುವ ಮುನ್ನವೇ ಗಾಂಧಿನಗರದಲ್ಲಿ ಚಿತ್ರವೊಂದರ ಹಾಡಿನ ಕಿಕ್ಕು ಬಲು ಜೋರಾಗಿ ಶುರುವಾಯಿತು. ನೂತನ ವರ್ಷವನ್ನು ಸ್ವಾಗತಿಸುವ ನೆಪದಲ್ಲಿ ವರ್ಷದ ಕೊನೆಯ ನಡುರಾತ್ರಿಯಲ್ಲಿ ಕಿಕ್ಕು ಏರಿಸಿಕೊಳ್ಳುವಂತೆ ಈ ಹಾಡು ಸಿಕ್ಕಾಪಟ್ಟೆ ಮತ್ತೇರಿಸುತ್ತಿದೆ.

ಹೀಗೆ ಮತ್ತೇರಿಸುವ ಹಾಡಿನ ಗಮ್ಮತ್ತಾದರೂ ಏನು? ‘ಎಣ್ಣೆ ನಮ್ದು ಊಟ ನಿಮ್ದು...’ ಎಂದು ಸಾಗುವ ಹಾಡಿಗೆ ತಕ್ಕಂತೆ ತಾಳ, ತಾಳಕ್ಕೆ ತಕ್ಕಂತೆ ಸಂಗೀತ ನಿರ್ದೇಶಕ ನವೀನ್ ಸಜ್ಜು ಅವರ ಸ್ಟೆಪ್ಸ್. ಅಂದಹಾಗೆ ಈ ಹಾಡು ಹೀಗೆ ಸದ್ದು

ಮಾಡಿರುವುದು ‘ಕನಕ’ ಚಿತ್ರದಲ್ಲಿ. ಸಿನಿಮಾ ಪ್ರಚಾರಕ್ಕಾಗಿಯೇ ವಿಶೇಷವಾಗಿ ನವೀನ್ ಸಜ್ಜು ಅವರೇ ಬರೆದು ಸಂಗೀತ ಸಂಯೋಜನೆ ಮಾಡುವ ಜತೆಗೆ ಹಾಡಿ ಕುಣಿದಿರುವುದು ಈ ಹಾಡಿನ ವಿಶೇಷ. ಈಗ ಹಾಡು ಹಿಟ್ ಆಗುತ್ತಿರುವಂತೆಯೇ ಈ ಪ್ರಮೋಷನ್ ಹಾಡನ್ನು ಚಿತ್ರದಲ್ಲೂ ಬಳಸಿಕೊಳ್ಳುವುದಕ್ಕೆ ನಿರ್ದೇಶಕ ಕಂ ನಿರ್ಮಾಪಕ ಆರ್ ಚಂದ್ರು ಮುಂದಾಗಿದ್ದಾರೆ.

ಇದಕ್ಕೂ ಮೊದಲು ಹಾಡಿನ ಪ್ರದರ್ಶನ ಹಾಗೂ ಚಿತ್ರದ ಹೊಸ ಟ್ರೇಲರ್ ಬಿಡುಗಡೆಗೆ ಸಂಭ್ರಮದಲ್ಲಿ ಸಿನಿಮಾ ತಂಡ ಮಾಧ್ಯಮಗಳ ಮುಂದೆ ಬಂತು. ದುನಿಯಾ ವಿಜಯ್ ನಾಯಕನಾಗಿರುವ ಈ ಚಿತ್ರಕ್ಕೆ ಮಾನ್ವಿತಾ ಹರೀಶ್ ಹಾಗೂ ಹರಿಪ್ರಿಯಾ ನಾಯಕಿಯರು. ರಂಗಾಯಣ ರಘು, ಕೆ ಪಿ ನಂಜುಂಡಿ ಸೇರಿದಂತೆ ಹಲವರು ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.