ಬೆಂಗಳೂರು: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅತೀ ಜನಪ್ರಿಯ ಮಕ್ಕಳ ನಾಟಕ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್'ನ ಫೈನಲ್'ನಲ್ಲಿ ಗದಗದ ಕುವರ ಪುಟ್ಟರಾಜು ಮತ್ತು ಮಂಗಳೂರಿನ ಚಿತ್ರಾಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಗೆದ್ದಿರುವುದು ಖಚಿತವಾದರೂ ವಿಜೇತರ ಬಗ್ಗೆ ವಾಹಿನಿ ಇನ್ನಷ್ಟೇ ಪ್ರಕಟಣೆ ನೀಡಬೇಕಿದೆ.
ಮಹೇಂದ್ರ ಮೊದಲ ರನ್ನರ್ ಅಪ್ ಮತ್ತು ಅಮೋಘ ಎರಡನೇ ರನ್ನರ್ ಅಪ್ ಆಗಿ ಜಯಗಳಿಸಿದ್ದಾರೆ. ಭಾನುವಾರ ಗದಗದ ವಿದ್ಯಾದಾನ ಸಮಿತಿ ಹೈಸ್ಕೂಲ್ ಕ್ರೀಡಾಂಗಣದಲ್ಲಿ ಅಂತಿನ ಸುತ್ತಿನ ಸ್ಪರ್ಧೆ ನಡೆದಿತ್ತು. ಫೈನಲ್ ಸ್ಪರ್ಧೆಯ ಕಂತು ಅಕ್ಟೋಬರ್ 1 ಮತ್ತು 2 ರಂದು ಪ್ರಸಾರವಾಗಲಿದೆ.
ಅಚಿಂತ್ಯ, ತುಷಾರ್, ಪುಟ್ಟರಾಜು, ಅಮೋಘ, ಚಿತ್ರಾಲಿ, ಮಹೇಂದ್ರ, ರೇವತಿ ಮತ್ತು ತೇಜಸ್ವಿನಿ ಫೈನಲ್ ಹಂತದಲ್ಲಿ ಸ್ಪರ್ಧಿಸಿದ್ದರು.
ಡ್ರಾಮಾ ಜೂನಿಯರ್ಸ್ ಫೈನಲ್'ನಲ್ಲಿ ಗೆದ್ದ ಪುಟಾಣಿಗಳ್ಯಾರು ಗೊತ್ತೆ?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos
