ಈ ಸಲವೂ ಡ್ರಾಮಾ ಜ್ಯೂನಿಯರ್ಸ್‌ಗಳನ್ನು ಆಯ್ಕೆ ಮಾಡಲು ನಿರ್ದೇಶಕ ಟಿಎಸ್ ಸೀತಾರಾಂ, ನಟಿ ಜ್ಯೂಲಿ ಲಕ್ಷ್ಮೀ, ನಟ ವಿಜಯ ರಾಘವೇಂದ್ರ ಇರುತ್ತಾರೆ. ಕಾರ್ಯಕ್ರಮದ ನಿರೂಪಣೆಯನ್ನೂ ಮಾಸ್ಟರ್ ಆನಂದ್ ಅವರೇ ಮಾಡಲಿದ್ದಾರೆ. ಈ ಮಕ್ಕಳನ್ನು ತರಬೇತಿಗೊಳಿಸುವ ಮೆಂಟರ್‌ಗಳಾಗಿ ವಿಕ್ರಂ ಸೂರಿ ಸೇರಿದಂತೆ ಹೋದ ಸೀಜನ್‌ನಲ್ಲಿ ಕೆಲಸ ಮಾಡಿದವರೇ ಇರುತ್ತಾರೆ. ಜೊತೆಗೆ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವ ಮತ್ತಷ್ಟು ತಂತ್ರಜ್ಞರೂ ಈ ಸಲ ಇರುತ್ತಾರೆ. ಒಟ್ಟಾರೆ ಹೊಸ ಸೀಜನ್ ಬೇರೆಯ ರೀತಿಯಲ್ಲಿ ಮೂಡಿ ಬರುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

‘ಡ್ರಾಮಾ ಜ್ಯೂನಿಯರ್ಸ್’ ಹುಟ್ಟುಹಾಕಿದ ನಿರೀಕ್ಷೆಯನ್ನೂ ಮೀರಿ ಈ ಸೀಸನ್‌ನಲ್ಲಿ ಗೆಲುವು ಸಾಸುವುದು ನಮ್ಮ ಮುಂದಿರುವ ಸವಾಲು.

-ಹಾಗೆನ್ನುತ್ತಾರೆ ಝೀ ಕನ್ನಡದ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು. ಎಂಬಲ್ಲಿಗೆ ಈ ಸಲ ನಿರೀಕ್ಷೆಯೂ ಜಾಸ್ತಿ, ಪರೀಕ್ಷೆಯೂ ಜಾಸ್ತಿ. ಅದಕ್ಕಾಗಿ ಒಂದು ದೊಡ್ಡ ತಂಡ ಸಿದ್ಧಗೊಂಡಿದೆ. 8 ಕೇಂದ್ರಗಳಲ್ಲಿ ಆಡಿಶನ್ ನಡೆಸಿ, ಅದರಲ್ಲಿ ಈಗ 30 ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅವರಿಗೋಸ್ಕರ ಒಂದು ತರಬೇತಿ ಕಾರ್ಯಕ್ರಮ ಶುರುವಾಗಿದೆ. ಅವರಿಗೋಸ್ಕರ ಒಂದು ಮೆಗಾ ಆಡಿಶನ್ ನಡೆದು, ಅಲ್ಲಿ 15 ಜನರನ್ನು ಆಯ್ಕೆ ಮಾಡಲಾಗುತ್ತದೆ. ಅಲ್ಲಿಂದ ಕನ್ನಡದ ಹೊಸ ಜ್ಯೂನಿಯರ್ ಪ್ರತಿಭೆಗಳ ಮಹಾ ಪಯಣ ಪ್ರಾರಂಭವಾಗುತ್ತದೆ. ಇದೇ ಜುಲೈ 22ಕ್ಕೆ ಸಂಚಿಕೆ ಪ್ರಾರಂಭಗೊಳ್ಳುತ್ತದೆ. ಈ ಸಲ ಕರ್ನಾಟಕದ ಯಾವ ಭಾಗದಿಂದ ಅಚಿಂತ್ಯ ಬರುತ್ತಾನೆ, ಚಿತ್ರಾಲಿ ಬರುತ್ತಾಳೆ, ಮಹತಿ ಬರುತ್ತಾಳೆ ಅನ್ನುವುದು ಈ ಸಂಚಿಕೆ ನೋಡಿದಾಗಲೇ ಗೊತ್ತಾಗಬೇಕಷ್ಟೇ.

ಹೆಚ್ಚುಕಡಿಮೆ ಅದೇ ತಂಡ

ಈ ಸಲವೂ ಡ್ರಾಮಾ ಜ್ಯೂನಿಯರ್ಸ್‌ಗಳನ್ನು ಆಯ್ಕೆ ಮಾಡಲು ನಿರ್ದೇಶಕ ಟಿಎಸ್ ಸೀತಾರಾಂ, ನಟಿ ಜ್ಯೂಲಿ ಲಕ್ಷ್ಮೀ, ನಟ ವಿಜಯ ರಾಘವೇಂದ್ರ ಇರುತ್ತಾರೆ. ಕಾರ್ಯಕ್ರಮದ ನಿರೂಪಣೆಯನ್ನೂ ಮಾಸ್ಟರ್ ಆನಂದ್ ಅವರೇ ಮಾಡಲಿದ್ದಾರೆ. ಈ ಮಕ್ಕಳನ್ನು ತರಬೇತಿಗೊಳಿಸುವ ಮೆಂಟರ್‌ಗಳಾಗಿ ವಿಕ್ರಂ ಸೂರಿ ಸೇರಿದಂತೆ ಹೋದ ಸೀಜನ್‌ನಲ್ಲಿ ಕೆಲಸ ಮಾಡಿದವರೇ ಇರುತ್ತಾರೆ. ಜೊತೆಗೆ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವ ಮತ್ತಷ್ಟು ತಂತ್ರಜ್ಞರೂ ಈ ಸಲ ಇರುತ್ತಾರೆ. ಒಟ್ಟಾರೆ ಹೊಸ ಸೀಜನ್ ಬೇರೆಯ ರೀತಿಯಲ್ಲಿ ಮೂಡಿ ಬರುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ರಂಗಭೂಮಿ, ಸಾಹಿತ್ಯಕ್ಕೆ ಪ್ರಾಶಸ್ತ್ಯ

ಈ ಸಲ ಸಿನಿಮಾಗಿಂತ ಹೆಚ್ಚಿಗೆ ರಂಗಭೂಮಿ, ಸಾಹಿತ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಉದ್ದೇಶಿಸಲಾಗಿದೆ. ಡ್ರಾಮಾ ಜ್ಯೂನಿಯರ್ಸ್ ಸೆಟ್ ಜೊತೆಗೆ ಈ ಸಲ ಔಟ್‌ಡೋರ್ ಎಪಿಸೋಡುಗಳನ್ನೂ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ‘ರಂಗಭೂಮಿ, ನಾಟಕಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಅಂತ ಅಂದುಕೊಂಡಿದ್ದೇವೆ. ರವೀಂದ್ರ ಕಲಾಕ್ಷೇತ್ರದಂಥ ಸಾರ್ವಜನಿಕ ಸ್ಥಳಗಳಲ್ಲಿ ಇದನ್ನು ನಡೆಸಿ, ಮಕ್ಕಳಿಂದ ಶುದ್ಧವಾದ ನಾಟಕವನ್ನೇ ಮಾಡಿಸೋಣ ಅನ್ನುವುದು ನಮ್ಮ ಯೋಚನೆ’ ಎನ್ನುತ್ತಾರೆ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು. ಅಷ್ಟೇ ಅಲ್ಲ, ಈ ಸಲ ಒಂದು ಗಂಟೆ ಕಾಲದ ನಾಟಕಗಳನ್ನೇ ವೇದಿಕೆ ಮೇಲೆ ಮಾಡಿಸುವ ಆಲೋಚನೆಯೂ ಇದೆಯಂತೆ. ಅದಕ್ಕಾಗಿ ಮತದಾನ ಸೇರಿದಂತೆ ಹಲವು ಶ್ರೇಷ್ಠ ಕೃತಿಗಳ ಹಕ್ಕನ್ನೇ ಖರೀದಿಸಲಾಗಿದೆ.

ಡಿಸ್ನಿ ಹೋಲುವ ಸ್ಟೇಜ್

ಈ ಸಲ ವೇದಿಕೆ ಕೂಡ ಕಳೆದ ಸೀಜನ್‌ಗಿಂತ ಬೇರೆಯದೇ ರೀತಿಯಲ್ಲಿ ಇರುತ್ತದೆ. ಇದು ಮಕ್ಕಳ ಶೋ ಆದ ಕಾರಣ, ಮಕ್ಕಳೇ ಹೆಚ್ಚಿನ ಪ್ರೇಕ್ಷಕರಾದ ಕಾರಣ ಅವರಿಗೆ ಆಕರ್ಷಣೀಯವಾಗುವಂತೆ ಒಂದು ್ಯಾಂಟಸಿ ಸೆಟ್ ಹಾಕುವ ಕಾರ್ಯ ಚಾಲನೆಯಲ್ಲಿದೆ. ಡಿಸ್ನಿಯನ್ನು ಹೋಲುವಂಥ ರಮಣೀಯ ಸೆಟ್ ಅದಾಗಿರುತ್ತದೆ.

ಇದು ಹೊಸ ಮಕ್ಕಳ ಡ್ರಾಮಾ

ಮೊದಲ ಸೀಸನ್‌ನಲ್ಲಿ ಆಡಿಶನ್‌ಗೆ ಬರುವವರಿಗೆ ಒಂದು ಮಾದರಿ ಇರಲಿಲ್ಲ. ಸಿನಿಮಾ ಡೈಲಾಗ್‌ಗಳನ್ನು ಹೇಳಿಸಿ ಮಕ್ಕಳನ್ನು ವೇದಿಕೆಗೆ ಕಳಿಸುತ್ತಿದ್ದರಂತೆ ಪೋಷಕರು. ಆದರೆ ಈ ಸಲ ಹಾಗಿಲ್ಲ, ‘ಡ್ರಾಮಾ ಜ್ಯೂನಿಯರ್ಸ್’ ನೋಡಿ ಪೋಷಕರೇ ಹೆಚ್ಚು ಪ್ರೊೆಶನಲ್ಲಾಗಿ ಬದಲಾಗಿದ್ದಾರಂತೆ. ಸ್ಕಿಟ್‌ಗಳನ್ನು ಸಿದ್ಧಪಡಿಸಿಕೊಂಡು ಬಂದು, ತುಂಬ ಪ್ರೊೆಶನಲ್ಲಾಗಿ ಆಡಿಶನ್‌ನಲ್ಲಿ ಈ ಸಲ ಮಕ್ಕಳು ಪಾಲ್ಗೊಂಡಿದ್ದಾರಂತೆ. ‘ಪೋಷಕರಾಗಲೀ, ನಾವಾಗಲೀ ಹಿಂದಿನ ಸೀಸನ್ ಮರೆತು, ಹೊಸ ಜಗತ್ತು, ಹೊಸ ಥರದ ಮಕ್ಕಳು, ಹೊಸ ಥರದ ಡ್ರಾಮಾ ಕಂಟೆಂಟ್ ಸಿದ್ಧಪಡಿಸುವ ಉತ್ಸಾಹದಲ್ಲಿದ್ದೇವೆ. ಈ ಸಲ ಆಯ್ಕೆಯಾದ ಮಕ್ಕಳು ಬೇರೆಯದೇ ಕಮಾಲ್ ಮಾಡುತ್ತಾರೆ’ ಎನ್ನುತ್ತಾರೆ ಹುಣಸೂರು.

(ಕನ್ನಡಪ್ರಭ ವಾರ್ತೆ)