ಡ್ರಾಮಾ ಜೂನಿಯರ್ಸ್ ಖ್ಯಾತಿಯ ಚಿತ್ರಾಲಿ ಈಗ ಹಿಂದಿ ಕಿರುತೆರೆಗೆ

Drama Juniors Chitrali debut to Hindi Small Screen
Highlights

ಇಂಡಿಯಾಸ್ ಬೆಸ್ಟ್ ಡ್ರಾಮೇಬಾಜ್’ ಅನ್ನೋದು ಡ್ರಾಮಾ ಜೂನಿಯರ್ಸ್ ಮಾದರಿಯಲ್ಲೇ ಇದು ಕೂಡ ಪುಟಾಣಿಗಳ ಆ್ಯಕ್ಟಿಂಗ್ ಟ್ಯಾಲೆಂಟ್ ಪ್ರದರ್ಶನದ ಬಹುದೊಡ್ಡ ವೇದಿಕೆ. ದೇಶದ ವಿವಿಧೆಡೆಗಳಿಂದ ಒಟ್ಟು ೧೬ ಪುಟಾಣಿಗಳು ಇದರ ಫೈನಲ್ ಸ್ಪರ್ಧಿಗಳು. ಅಷ್ಟು ಪುಟಾಣಿಗಳಲ್ಲಿ ಚಿತ್ರಾಲಿ ಕೂಡ ಒಬ್ಬಳು. ಝೀ ಟಿವಿಯಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋ, ಹಿಂದಿ ಕಿರುತೆರೆ ಜಗತ್ತಿನಲ್ಲಿ ಬಹು ಜನಪ್ರಿಯ ಕಾರ್ಯಕ್ರಮ.

ಬೆಂಗಳೂರು (ಜೂ. 04): ಝೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಪುಟಾಣಿ ಚಿತ್ರಾಲಿ ಹಿಂದಿ ಕಿರುತೆರೆಗೆ ಕಾಲಿಟ್ಟಿದ್ದಾರೆ. ಹಿಂದಿಯ ಝೀ ನೆಟ್‌ವರ್ಕ್ ಪ್ರಸ್ತುತಪಡಿಸುತ್ತಿರುವ ‘ಇಂಡಿಯಾಸ್ ಬೆಸ್ಟ್ ಡ್ರಾಮೇಬಾಜ್ ಸೀಸನ್ ೩’ ಶೋಗೆ ಚಿತ್ರಾಲಿ ಆಯ್ಕೆ ಆಗಿದ್ದು, ಜೂನ್ 30 ರಿಂದಲೇ ಆನ್‌ಸ್ಕ್ರೀನ್‌ನಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾಳೆ.

‘ಇಂಡಿಯಾಸ್ ಬೆಸ್ಟ್ ಡ್ರಾಮೇಬಾಜ್’ ಅನ್ನೋದು ಡ್ರಾಮಾ ಜೂನಿಯರ್ಸ್ ಮಾದರಿಯಲ್ಲೇ ಇದು ಕೂಡ ಪುಟಾಣಿಗಳ ಆ್ಯಕ್ಟಿಂಗ್ ಟ್ಯಾಲೆಂಟ್ ಪ್ರದರ್ಶನದ ಬಹುದೊಡ್ಡ ವೇದಿಕೆ. ದೇಶದ ವಿವಿಧೆಡೆಗಳಿಂದ ಒಟ್ಟು 16 ಪುಟಾಣಿಗಳು ಇದರ ಫೈನಲ್ ಸ್ಪರ್ಧಿಗಳು. ಅಷ್ಟು ಪುಟಾಣಿಗಳಲ್ಲಿ ಚಿತ್ರಾಲಿ ಕೂಡ ಒಬ್ಬಳು. ಝೀ ಟಿವಿಯಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋ, ಹಿಂದಿ ಕಿರುತೆರೆ ಜಗತ್ತಿನಲ್ಲಿ ಬಹು ಜನಪ್ರಿಯ ಕಾರ್ಯಕ್ರಮ.

ವಿವೇಕ್ ಒಬೆರಾಯ್, ಸೋನಾಲಿ ಬೇಂದ್ರೆ ಮೆಚ್ಚುಗೆ: ವಿವೇಕ್ ಒಬೆರಾಯ್, ಸೋನಾಲಿ ಬೆಂದ್ರೆ ಹಾಗೂ ನಟ, ನಿರ್ದೇಶಕ ಅನುರಾಗ್ ಬಸು ಈ ಶೋ ತೀರ್ಪುಗಾರರು. ಈ ಕಾರ್ಯಕ್ರಮದಲ್ಲಿ ಡಾನ್ಸ್  ಕೂಡ ಇಂಪಾರ್ಟೆಂಟ್. ‘ಆ್ಯಕ್ಟಿಂಗ್ ಟ್ಯಾಲೆಂಟ್  ಜತೆಗೆ ಇಲ್ಲಿ ಡಾನ್ಸ್ ಕೂಡ ಪ್ರದರ್ಶಿಸಬೇಕಿದೆ. ಚಿತ್ರಾಲಿಗೆ ಅಷ್ಟಾಗಿ ಡಾನ್ಸ್ ಗೊತ್ತಿಲ್ಲ. ಅದಕ್ಕೆ ಅಗತ್ಯವಾಗಿ ಬೇಕಾದ ತರಬೇತಿ ನಡೆದಿದೆ. ಹಿಂದಿ ಭಾಷೆಯನ್ನು ಆಕೆಯ ಕಲಿಯುತ್ತಿದ್ದಾಳೆ. ಆ ಶೋಗೆ ಬೇಕಾದ ಎಲ್ಲಾ ತರಬೇತಿ ನೀಡಲಾಗುತ್ತಿದೆ. ಆಕೆಯ ಉತ್ಸಾಹ, ಬದ್ಧತೆ ನೋಡಿದ್ರೆ ಶೋನಲ್ಲಿ ಉತ್ತಮ ಪರ್‌ಫಾರ್ಮೆನ್ಸ್ ತೋರುವ ವಿಶ್ವಾಸವಿದೆ’ ಎನ್ನುತ್ತಾರೆ.  ಚಿತ್ರಾಲಿ ತಂದೆ ತೇಜ್‌ಪಾಲ್. ಸದ್ಯಕ್ಕೆ ಈ ಶೋನ ಮೊದಲ ಎಪಿಸೋಡ್ ಟೆಲಿಕಾಸ್ಟ್ ಆಗಿದೆ. ಚಿತ್ರಾಲಿ ಎಂಟ್ರಿಗೆ ತೀರ್ಪುಗಾರರ ಮೆಚ್ಚುಗೆ ಸಿಕ್ಕಿದೆ.

32 ಸಾವಿರ ಮಕ್ಕಳಲ್ಲಿ ಆಯ್ಕೆಯಾದ ಪುಟಾಣಿ ಈ ಶೋಗೆ ಝೀ ನೆಟ್‌ವರ್ಕ್, ದೇಶದ ಹಲವು ಕಡೆಗಳಲ್ಲಿ ಒಟ್ಟು 32 ಸಾವಿರ ಮಕ್ಕಳ ಆಡಿಷನ್ ನಡೆಸಿದೆ. ಅದರಲ್ಲಿ ಫೈನಲ್ ಆಡಿಷನ್‌ಗೆ 100 ಮಕ್ಕಳಿಗೆ ಅವಕಾಶ ನೀಡಿತ್ತು. ಅಷ್ಟು ಮಕ್ಕಳನ್ನು ಮತ್ತೊಮ್ಮೆ ಆಡಿಷನ್ ನಡೆಸಿ ಅಂತಿಮವಾಗಿ 16 ಮಕ್ಕಳು ಶೋಗೆ ಆಯ್ಕೆಯಾದರು.

loader