ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ರಮೇಶ್ ಸಮಾಧಿ ಕಟ್ಟೆಯ ಮೇಲೆ ಅವರ ಭಾವಚಿತ್ರ ಜೊತೆ ದಿವಂಗತ ನಟ ವಿಷ್ಣುವರ್ಧನ್ ಭಾವಚಿತ್ರ ಹಾಕಲಾಗಿದ್ದು ಫೋಟೋ ಎಲ್ಲೆಡೆ ವೈರಲ್ ಆಗಿದೆ.
ಸಿನಿಮಾ ನಟರಿಗೆ ಯಾವ ಯಾವ ರೀತಿ ಅಭಿಮಾನಿಗಳು ಇರುತ್ತಾರೆ ಅನ್ನೊದಕ್ಕೆ ಯಮಲೂರು ವಿಷ್ಣು ಸೇನಾ ಅಧ್ಯಕ್ಷ ರಮೇಶ್ ಸಾಕ್ಷಿಯಾಗಿದ್ದಾರೆ.
ವಿಷ್ಣು ಸೇನಾ ಸಮಿತಿ ಅಧ್ಯಕ್ಷರಾಗಿದ್ದ ರಮೇಶ್ ನಿಧನರಾಗಿ ಒಂದು ವರ್ಷ ಕಳೆದಿದೆ. ಅವರ ಸಮಾಧಿ ಮೇಲೆ ಅವರ ಭಾವಚಿತ್ರದ ಜೊತೆ ವಿಷ್ಣು ದಾದನ ಭಾವಚಿತ್ರವನ್ನೂ ಹಾಕಲಾಗಿದೆ. ಕುಟುಂಬಸ್ತರು ಹೇಳುವ ಪ್ರಕಾರ ಇದು ಅವರ ಕೊನೆಯ ಆಸೆ ಆಗಿತ್ತಂತೆ.
ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ಗಳ ಹುಟ್ಟು ಹಬ್ಬದಂದು ಕೇಕ್, ಹೂ ಮಾಲೆ ತರವ ಮೂಲಕ ಪ್ರೀತಿ ತೋರಿಸುತ್ತಾರೆ. ಆದರೆ ಇಂತಹ ಅಭಿಮಾನಿಗಳು ಕೋಟಿಗೊಬ್ಬರು.
ರಮೇಶ್ ತಮ್ಮ ಕುಟುಂಬಸ್ತರ ಜೊತೆ ‘ತಾನು ಸತ್ತ ಬಳಿಕ ಸಮಾಧಿ ಮೇಲೆ ನೆಡುವ ಗುರುತಿನ ಮೇಲೆ ವಿಷ್ಣು ಅವರ ಫೋಟೋ ಇರಬೇಕು’ ಎಂದು ಹೇಳಿಕೊಂಡಿದ್ದರಂತೆ.
