2 ವರ್ಷದ ಪುತ್ರ ತೈಮೂರ್ ಅಲಿ ಖಾನ್ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಲ್ಲಿರುವ ಪುಟ್ಟಬಾಲಕ. ಆತ ಎಲ್ಲಿ ಹೋದರೂ, ಅದೇ ಸುದ್ದಿಯಾಗುತ್ತದೆ. ಆದರೀಗ ಇದನ್ನೇ ಲಾಭ ಮಾಡಿಕೊಂಡ ಕಂಪೆನಿಯೊಂದು ತೈಮೂರ್‌ನಂತೆ ಕಾಣುವ ಬೊಂಬೆಗಳನ್ನು ಮಾಡಿ ಮಾರಾಟ ನಡೆಸುತ್ತಿದೆ.
ನಟ ಸೈಫ್ ಅಲಿಖಾನ್ ಮತ್ತು ಕರೀನಾ ಕಪೂರ್‌ರ 2 ವರ್ಷದ ಪುತ್ರ ತೈಮೂರ್ ಅಲಿ ಖಾನ್ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಲ್ಲಿರುವ ಪುಟ್ಟಬಾಲಕ. ಆತ ಎಲ್ಲಿ ಹೋದರೂ, ಅದೇ ಸುದ್ದಿಯಾಗುತ್ತದೆ.
ಇದನ್ನೇ ಲಾಭ ಮಾಡಿಕೊಳ್ಳಲು ಮುಂದಾಗಿರುವ ಕೇರಳ ಮೂಲದ ಫಸ್ಟ್‌ಕ್ರೈ ಎಂಬ ಕಂಪನಿ, ತೈಮೂರ್ ಹೋಲುವ, ಎತ್ತಿಕೊಂಡರೆ, ತೈಮೂರ್ ಎತ್ತಿಕೊಂಡ ಅನುಭವವನ್ನೇ ನೀಡುವ ಗೊಂಬೆಯನ್ನು ಬಿಡುಗಡೆ ಮಾಡಿದೆ. ತೈಮೂರ್ ಬಾಬಾ ಹೆಸರಿನ ಈ ಬೊಂಬೆಗೆ 980 ರು. ಬೆಲೆ ನಿಗದಿಪಡಿಸಲಾಗಿದೆ.
ಮಗನಂತೆ ಕಾಣುವ ಬೊಂಬೆ ಮಾರಾಟಕ್ಕೆ ಸಮಬಂಧಿಸಿದಂತೆ ಪ್ರತಿಕ್ರಿಯಿಸಿರುವ ತೈಮೂರ್ ತಂದೆ ನಟ ಸೈಫ್ ಅಲಿ ಖಾನ್ ‘ನನ್ನ ಮಗನಿಂದ ಅವರು ಲಾಭ ಪಡೆದುಕೊಳ್ಳುತ್ತಿದ್ದರೆಂದರೆ ಖುಷಿಯ ವಿಚಾರ. ಇದಕ್ಕೆ ಪ್ರತಯಾಗಿ ನನ್ನ ಮಗ ತೈಮೂರ್‌ಗೆ ಖುಷಿ ಹಾಗೂ ಆಎರೋಗ್ಯವನ್ನು ದೇವರು ಕರುಣಿಸಲಿ ಎಂದು ಬೇಡುತ್ತೇನೆ' ಎಂದಿದ್ದಾರೆ.
