ಬೆಂಗಳೂರು(ಸೆ.15): ಕಾವೇರಿ ಪ್ರತಿಭಟನೆಯ ಬಿಸಿ ಸಿನಿಮಾಗಳಿಗೂ ತಟ್ಟಿದೆ. ಕಾವೇರಿ ಬಂದ್ ಹಿನ್ನಲೆಯಲ್ಲಿ ಚಿತ್ರಮಂದಿರಗಳು ಕೂಡ ಬಂದ್ ಆಗಿದ್ದು ರಿಲೀಸ್ ಆಗಿರುವ ಸಿನಿಮಾಗಳು ಪ್ರೇಕ್ಷಕರ ದರ್ಶನ ಪಡೆದಿಲ್ಲ. ಹಾಗಾಗಿ ರಿಲೀಸ್ ಆಗಿರುವ ಸಿನಿಮಾಗಳು ಒಂದಿಷ್ಟು ದಿನ ಓಡಲಿ ಎನ್ನುವ ಕಾರಣಕ್ಕೆ ಮುಂಬರುವ ಸಿನಿಮಾಗಳಿಗೆ ಒಂದು ವಾರ ತಡವಾಗಿ ಬರುವಂತೆ ಸೂಚಿಸಿವೆ.
ಹೀಗಾಗಿ ಸೆಪ್ಟೆಂಬರ್ 23 ಕ್ಕೆ ರಿಲೀಸ್ ಆಗ್ಬೇಕಿದ್ದ ಪುನೀತ್ ಅಭಿನಯದ ದೊಡ್ಮನೆ ಹುಡುಗ ಸಿನಿಮಾ ಒಂದು ವಾರ ತಡವಾಗಿ ತೆರೆಗೆ ಬರ್ತಿದೆ
