ನಾನು ಯಾವುದನ್ನೂ ನಿರಾಕರಿಸುತ್ತಿಲ್ಲ. ಈ ಬಗ್ಗೆ ನಾವು ಮಾತುಕತೆ ನಡೆಸುತ್ತಿದ್ದೇವೆ, ಆದರೆ ಇನ್ನೂ ನಿರ್ಧಾರಕ್ಕೆ ಬರಬೇಕಿದೆ. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಾನು ಅಭಿಮಾನಿಗಳನ್ನು ಭೇಟಿ ಮಾಡಲಿದ್ದೇನೆ.

ಚೆನ್ನೈ(ಜೂ.23): ಸೂಪರ್‌ಸ್ಟಾರ್ ರಜನೀಕಾಂತ್ ರಾಜಕೀಯಕ್ಕೆ ಬರುವ ಸುದ್ದಿಗೆ ಮತ್ತೆ ರೆಕ್ಕೆಪುಕ್ಕ ಬಂದಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಅವರು ಈ ಕುರಿತ ‘ದೊಡ್ಡ ಘೋಷಣೆ’ ಮಾಡುವ ಸುಳಿವು ದೊರಕಿದೆ.

Add Asianetnews Kannada as a Preferred SourcegooglePreferred

ಗುರುವಾರ ಇಲ್ಲಿ ಸುದ್ದಿಗಾರರು ರಾಜಕೀಯ ಪ್ರವೇಶದ ಬಗ್ಗೆ ಪ್ರಶ್ನಿಸಿದಾಗ, ‘ ನಾನು ಯಾವುದನ್ನೂ ನಿರಾಕರಿಸುತ್ತಿಲ್ಲ. ಈ ಬಗ್ಗೆ ನಾವು ಮಾತುಕತೆ ನಡೆಸುತ್ತಿದ್ದೇವೆ, ಆದರೆ ಇನ್ನೂ ನಿರ್ಧಾರಕ್ಕೆ ಬರಬೇಕಿದೆ. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಾನು ಅಭಿಮಾನಿಗಳನ್ನು ಭೇಟಿ ಮಾಡಲಿದ್ದೇನೆ. ಯಾವಾಗ ನಾನು ರಾಜಕೀಯಕ್ಕೆ ಬರಬೇಕು ಎಂದು ಮನಸ್ಸು ಮಾಡುತ್ತೇನೋ ಆಗ ಘೋಷಣೆ ಮಾಡುತ್ತೇನೆ. ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ’ ಎಂದು ಹೇಳಿದರು.

ತಮ್ಮ ‘ಎಂದಿರನ್ 2.೦’ ಚಿತ್ರ ಬಿಡುಗಡೆ ನಂತರ ಅಭಿಮಾನಿಗಳ ಸಭೆ ನಡೆಸುವುದಾಗಿ ಅವರು ಹೇಳಿದರು.