ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಶೋ ಒಂದು ರಚಿತಾ ಅವರ ಭಾವನೆ ವ್ಯಕ್ತಮಾಡಲು ವೇದಿಕೆಯಾಯಿತು. ಹಾಸ್ಯದ ದೃಷ್ಟಿಯಿಂದಲೇ ವೇದಿಕೆ ಮೇಲೆ ಬಂದ ಒಂದಷ್ಟು ಜನ ಹುಡುಗರು ನಾವೆಲ್ಲ ಗೌಡರು ಎಂದು ಪರಿಚಯ ಮಾಡಿಕೊಳ್ಳಲು ಆರಂಭಿಸಿದರು. ಇದಾದ ಮೇಲೆ ಮಾತನಾಡಿದ ರಚಿತಾ ಅನೇಕ ವಿಚಾರಗಳನ್ನು ಹೇಳಿದರು.

ಯಾವ ಸಂದರ್ಭದಲ್ಲಿ ಆ ರೀತಿ ಹೇಳಿದೆನೋ[ಗೌಡರ ಹುಡುಗ] ಗೊತ್ತಿಲ್ಲ. ಇರಲಾರದೆ .... ಬಿಟ್ಟುಕೊಂಡೆವು ಅನ್ನಂಗಾಗಿದೆ. ಎಲ್ಲ ಪ್ರೇಸ್ ಮೀಟ್‌ ನಲ್ಲಿಯೂ ಯಾವಾಗ ಮದುವೆ ಆಗ್ತೀರಾ? ರಿಲೇಶನ್ ಶಿಪ್ ನಲ್ಲಿ ಇದ್ದೀರಾ ನೀವು? ಎಂದೆಲ್ಲ ಪ್ರಶ್ನೆ ಕೇಳುತ್ತಾರೆ ಯಾಕೆ ಅನ್ನೋದೆ ಗೊತ್ತಿಲ್ಲ.
ಮದುವೆಯಾಗಲು ಗೌಡರ ಹುಡಗುಗನೇ ಬೇಕೆಂದ ರಚಿತಾ

ಕರಿಯರ್ ಬಗ್ಗೆ ಏನು ಮಾತನಾಡಿದ್ದರೂ ತೆಗೆದುಳ್ಳುತ್ತೇನೆ. ಆದರೆ ಪ್ರತಿಯೊಬ್ಬರಿಗೂ ಪರ್ಸನಲ್ ಲೈಫ್ ಇರುತ್ತದೆ. ಪರ್ಸನಲ್ ಲೈಫ್‌ ನಲ್ಲಿ ತಂದೆ ತಾಯಿ ಇರ್ತಾರೆ. ತಂದೆ ತಾಯಿ ಡಿಸಿಶನ್ ತಗೋತಾರೆ.

ನೀವು ಈ ಪಾತ್ರ ಮಾಡಬೇಡಿ ಎಂದು ಹೇಳಿ ಮಾಡಲ್ಲ.  ಆದರೆ ಪರ್ಸನಲ್ ಲೈಫ್ ಅನ್ನೋದು ಸೆಲೆಬ್ರಿಟಿಗಳಿಗೂ ಇರುತ್ತದೆ.  ದಯವಿಟ್ಟು ವಿನಂತಿ ಮಾಡಿಕೊಳ್ಳುತ್ತೇವೆ ನಮ್ಮ ಪರ್ಸನಲ್ ಲೈಫ್ ಬಿಟ್ಟು ಬಿಡಿ ಎಂದರು.