ಕಾರಣವಿಲ್ಲದ ಕಾರಣಕ್ಕೆ ತಮ್ಮ ಅರೆನಗ್ನ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದಕ್ಕೆ ಕಮಲ್ ಹಾಸನ್ ಕಿರಿಯ ಪುತ್ರಿ ಅಕ್ಷರಾ ಹಾಸನ್ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಅವರು ನೀಡಿರುವ ಸಲಹೆ ಏನು?
ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರ ಎರಡನೇ ಪುತ್ರಿ ಅಕ್ಷರಾ ಹಾಸನ್ ಖಾಸಗಿ ಫೋಟೋಗಳು ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಈ ಪೋಟೋಗಳು ಸೋಶಿಯಲ್ ಮೀಡಿಯಾಕ್ಕೆ ಹೇಗೆ ಲಭ್ಯವಾದವು? ಯಾವ ಮೂಲದಿಂದ ಹರಿದು ಬಂತು ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.
ಪುರುಷರಿಗೆ ಹಾಲುಣಿಸಿದ್ರೆ ಸ್ತನ ಕ್ಯಾನ್ಸರ್ ಸಂಭವ ಕಡಿಮೆ ಆಗುತ್ತಾ?
ನನ್ನ ಖಾಸಗಿ ಪೋಟೋಗಳು ಅಂತರ್ಜಾಲದಲ್ಲಿ ಲೀಕ್ ಆಗಿದ್ದವು. ಯಾರು ಇದನ್ನು ಮಾಡಿದ್ದಾರೋ ನನಗೆ ಇಂದಿಗೂ ತಿಳಿದು ಬಂದಿಲ್ಲ. ಆದರೆ ಒಂದು ಹುಡುಗಿ ಈ ರೀತಿ ಟಾರ್ಗೆಟ್ ಆಗಿದ್ದು ನಿಜಕ್ಕೂ ದುರದೃಷ್ಟಕರ. ಕೆಲ ವಿಕೃತ ಮನಸ್ಸುಗಳ ಆಟಕ್ಕೆ ಈ ರೀತಿ ಬಲಿಯಾಗಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಲೀಕ್ ಆಯ್ತು ಅಕ್ಷರಾ ಹಾಸನ್ ಅರೆನಗ್ನ ಪೋಟೋ
ಬೇರೆ ಬೇರೆ ತಲೆಬರಹದಲ್ಲಿ ಈ ಫೋಟೋ ಶೇರ್ ಆದಾಗಲೆಲ್ಲ ನನ್ನನ್ನು ಎಳೆದಂತಾಗುತ್ತದೆ. ಈ ತರಹ ನಡೆದುಕೊಳ್ಳುವ ಪ್ರತಿಯೊಬ್ಬರೂ ನನ್ನ ಮೇಲಿನ ದೌರ್ಜನ್ಯಕ್ಕೆ ಕಾರನವಾದಂತೆ ಭಾಸವಾಗುತ್ತಿದೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಮುಂಬೈ ಸೈಬರ್ ಪೊಲೀಸರಿಗೂ ದೂರು ನೀಡಿದ್ದಾರೆ.
