ಕತ್ರಿನಾ ನೀ ಎಲ್ಲಿ ಮಾಯ?

Disappeared Katrina Kaif appeared in America
Highlights

ಇತ್ತೀಚಿಗೆ ಕತ್ರಿನಾ ಕೈಫ್ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಅರೇ! ಎಲ್ಲಿ ಮಾಯವಾಗಿ ಬಿಟ್ರು ಅಂದ್ಕೊಳ್ಳುವಾಗ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಹೊಸ ಗೆಟಪ್, ಹೊಸ ಹೇರ್  ಸ್ಟೈಲ್’ಲಿ ಪ್ರತ್ಯಕ್ಷವಾಗಿದ್ದಾರೆ ಕತ್ರಿನಾ ಕೈಫ್. 

ಕತ್ರಿನಾ ಕೈಫ್ ಎಲ್ಲಿ ಮಾಯವಾದರು ಎಂದು ಅಭಿಮಾನಿಗಳು  ಹುಡುಕಾಟ ಶುರು ಮಾಡಬೇಕು ಎನ್ನುವ ಹೊತ್ತಿಗೆ ಸೋನಾಕ್ಷಿ ಸಿನ್ಹಾ, ಜಾಕ್ವೆಲಿನ್ ಫೆರ್ನಾಂಡಿಸ್ ಜೊತೆಗೆ ವಿಮಾನದ ಬಾಗಿಲಲ್ಲಿ ನಿಂತು ಅಮೆರಿಕಾಕ್ಕೆ ಹಾರುವ ಫೋಟೋ ಕ್ಲಿಕ್ಕಿಸಿಕೊಂಡು ಸೋಷಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. 

ಓಹ್ ಕತ್ರಿನಾ ಅಮೆರಿಕಾಕ್ಕೆ ಹೋಗುತ್ತಿದ್ದಾರೆ ಎಂದುಕೊಂಡು ಸಮಾಧಾನ ಮಾಡಿಕೊಳ್ಳುವ ಹೊತ್ತಿಗೆ ಕತ್ರಿನಾ ಇನ್‌ಸ್ಟಾಗ್ರಾಂ ಅಕೌಂಟ್’ನಲ್ಲಿ ಬ್ಲಾಕ್ ಆ್ಯಂಡ್ ವೈಟ್ ಫೋಟೋಗಳ ಅಬ್ಬರ ಜೋರಾಯಿತು.
ಮಾದಕ ನೋಟ, ಬಿಚ್ಚಿದ ತಲೆ ಕೂದಲು, ನೃತ್ಯದ ಭಂಗಿ, ಹಿನ್ನೆಲೆಯಲ್ಲೊಂದಷ್ಟು ಹೋಗೆ ಇದೆಲ್ಲವೂ ಸೇರಿ ಕತ್ರಿನಾ ಹಾಟ್ ಹಾಟ್ ಆಗಿ ಕಾಣಿಸಿಕೊಂಡು ಸಿಕ್ಕಾಪಟ್ಟೆ ಲೈಕು, ಕಾಮೆಂಟ್‌ಗಳನ್ನ ಪಡೆದುಕೊಂಡುಬಿಟ್ಟರು ಕ್ಷಣಾರ್ಧದಲ್ಲಿ. ಕತ್ರಿನಾ ಅಮೆರಿಕಾಕ್ಕೆ ಹೋಗಿ ಫುಲ್ ಎಂಜಾಯ್ ಮೂಡ್‌ನಲ್ಲಿ ಇದ್ದಾರೆ ಎಂದುಕೊಂಡರೆ ಅದು ಸುಳ್ಳು,

ಅದಕ್ಕೆ ಬದಲಾಗಿ ಕತ್ರಿನಾ ಇಷ್ಟೆಲ್ಲಾ ಸಾಹಸ ಮಾಡುತ್ತಿರುವುದು ತಮ್ಮ  ಮುಂದಿನ ಚಿತ್ರದ ತಯಾರಿಗಾಗಿ. ಅದೇನೇ ಆದರೂ ಈಗ ಕತ್ರಿನಾ ಬ್ಲಾಕ್ ಅಂಡ್ ವೈಟ್ ಫೋಟೋದಲ್ಲೂ ಕಲರ್‌ಫುಲ್ ಆಗಿ ಹುಚ್ಚು ಅಭಿಮಾನಿಗಳ ಪಾಲಿಗೆ ಭಿನ್ನ ರೀತಿಯಲ್ಲಿ ದರುಶನ ದಯಪಾಲಿಸಿರುವುದು ಸುಳ್ಳಲ್ಲ. 

loader