ಈಕೆ ಹೆಸರು ರೀಷ್ಮಾ ನಾಣಯ್ಯ. ಮೂಲತಃ ಕೂರ್ಗ್‌ ಕುವರಿ. ಜೋಗಿ ಪ್ರೇಮ್‌ ನಿರ್ದೇಶನದ ‘ಏಕ್‌ಲವ್‌ಯಾ’ ಚಿತ್ರಕ್ಕೆ ಈಕೆಯೇ ನಾಯಕಿ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಆಗಮಿಸುತ್ತಿರುವ ಈ ನವತಾರೆಗೆ ರಕ್ಷಿತಾ ಸೋದರ ರಾಣಾ ನಾಯಕ.

ರಕ್ಷಿತಾ ಪ್ರೇಮ್ ಕೈಯಲ್ಲಿ ತಗಲ್ಲಾಕ್ಕೊಂಡ್ರಾ ಡಿಂಪಲ್ ಕ್ವೀನ್?

ಬೆಂಗಳೂರಿನ ಜ್ಯೋತಿ ನಿವಾಸ್‌ ಕಾಲೇಜಿನಲ್ಲಿ ಈಗಷ್ಟೆಪಿಯುಸಿ ಓದುತ್ತಿರುವ ಈ ಹದಿಹರೆಯದ ಚೆಲುವೆಯನ್ನು ‘ಫ್ರೆಶ್‌ ಫೇಸ್‌’ ಕಾರ್ಯಕ್ರಮದಲ್ಲಿ ನೋಡಿ ನಿರ್ದೇಶಕ ಪ್ರೇಮ್‌ ಅವರೇ ಸ್ವತಃ ಫೋನ್‌ ಮಾಡಿ ಕರೆಸಿಕೊಂಡು ನಾಯಕಿ ಪಟ್ಟದಲ್ಲಿ ಕೂರಿಸಿದ್ದಾರೆ. ರಕ್ಷಿತಾ ಪ್ರೇಮ್‌ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸತತವಾಗಿ ಚಿತ್ರೀಕರಣ ನಡೆಯುತ್ತಿದ್ದು, ಇನೊಂದು ವಾರದಲ್ಲಿ ರೀಷ್ಮಾ ನಾಣಯ್ಯ ಪಾತ್ರದ ಚಿತ್ರೀಕರಣ ಶುರುವಾಗಲಿದೆ. ನಟನೆಗೆ ಬೇಕಾದ ತಯಾರಿ ಮಾಡಿಕೊಂಡಿರುವ ರೀಷ್ಮಾ, ಇನ್ನು ಕ್ಯಾಮೆರಾ ಮುಂದೆ ನಿಲ್ಲುವುದಷ್ಟೆಬಾಕಿ.

ನಿರ್ದೇಶಕ ಪ್ರೇಮ್ ‘ಎಕ್‌ಲವ್‌ಯಾ’ ಶೂಟಿಂಗ್ ನಲ್ಲಿ ಫೈಟಿಂಗ್ ?