ರಿಯಾಲಿಟಿ ಶೋಗಳಲ್ಲಿ ವಿವಾದಗಳಿಂದಲೇ ಫೇಮಸ್ ಆಗಿರುವ ಬಿಗ್ ಬಾಸ್ ಜನರಿಗೆ ಮನೋರಂಜನೆ ನೀಡುವುದರಲ್ಲೂ ಫೇಮಸ್. ಒಳಗಿದ್ದ ಸ್ಫರ್ಧಿಗಳು ಜಗಳವಾಡಿಕೊಂಡರೂ ಪ್ರೇಕ್ಷಕರ ಮನೋರಂಜನೆಗೆ ಮಾತ್ರ ಇಲ್ಲಿ ಕೊರತೆ ಇಲ್ಲ. ಆದರೀಗ  ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಈಗಾಗಲೇ ತನ್ನ ಧ್ವನಿಯಿಂದ ಜನರನ್ನು ನಗೆಗಡಲಲ್ಲಿ ತೇಲಿಸಿದ, ಹಾಗೂ ಹಾಡುಗಳಿಂದ ಸೋಷಲ್ ಮೀಡಿಯಾದಲ್ಲಿ ತನ್ನದೇ ಹವಾ ಸೃಷ್ಟಿಸಿರುವ ಡಿಂಚಕ್ ಪೂಜಾ ಬಿಗ್ ಮನೆಗೆ ಎಂಟ್ರಿ ಕೊಡಲಿದ್ದಾಳೆ ಎಂದು ತಿಳಿದು ಬಂದಿದೆ.

ಇಂಟರ್ನೆಟ್ ಸೆಂನ್ಸೇಷನದ ಆಗಿರುವ ಡಿಂಚಕ್ ಪೂಜಾ, ತನ್ನ ವಿಭಿನ್ನ ಹಾಡುಗಳಿಂದ ಕೆಲವೇ ದಿನಗಳಲ್ಲಿ ಸಾಮಾಜಿಕ ಜಾಲಾತಾಣಗಳಲ್ಲಿ ಅತಿ ವೇಗವಾಗಿ ತನ್ನದೇ ಹವಾ ಸೃಷ್ಟಿಸಿದ್ದಳು. ಈಕೆಯ 'ಸೆಲ್ಫೀ ಮೈನೆ ಲೇ ಲೀ ಆಜ್' 'ಸ್ವ್ಯಾಗ್ವಾಲಿ ಟೋಪಿ', 'ದಿಲೋಂ ಕಾಶೂಟರ್ ಹೆ ಮೇರಾ ಸ್ಕೂಟರ್' ಮೊದಲಾದ ಹಾಡುಗಳು ಭಾರೀ ಸದ್ದು ಮಾಡಿದ್ದವು. ಹಾಡುಗಳಿಂದ ಈಕೆಯ ಕುರಿತಾಗಿ ಜನರು ಜೋಕ್ ಮಾಡುತ್ತಿದ್ದರೂ, ತನ್ನದೇ ಆದ ಛಾಪು ಮೂಡಿಸುವಲ್ಲಿ ಈಕೆ ಯಶಸ್ವಿಯಾಗಿದ್ದಳು. ಇದೀಗ 'ಡಿಂಚಕ್' ಖ್ಯಾತಿಯಪೂಜಾ ಹಿಂದಿ ಬಿಗ್ ಬಾಸ್ 11 ನೇ ಸೀಜನ್'ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ನೀಡಲು ಸಜ್ಜಾಗಿದ್ದಾಳೆ.]

ಈಕೆಯೊಂದಿಗೆ ಸೀಜನ್ 11ರ ಮೊದಲ ವಾರದಲ್ಲೇ ಎವಿಕ್ಟ್ ಆಗಿದ್ದ ಪ್ರಿಯಾಂಕ್ ಶರ್ಮಾ ಕೂಡಾ ಬಿಗ್ ಮನೆಗೆ ಎಂಟ್ರಿ ಕೊಡುವುದು ಖಚಿತವಾಗಿದೆ. ವಿಕಾಲ್ ಗುಪ್ತಾ ಹಾಗೂ ಆಕಾಶ್ ದದ್ಲಾನಿಯ ನಡುವಿನ ಜಗಳದಲ್ಲಿ ಈತ ಅಗತ್ಯವಿಲ್ಲದಿದ್ದರೂ ಪ್ರವೇಶಿಸಿ, ಆಕಾಶ್'ಗೆ ಥಳಿಸಿದ್ದ. ಕಾರಣದಿಂದಾಗಿ ಪ್ರಿಯಾಂಕ್'ನನ್ನು ಮನರಯಿಂದ ಹೊರ ಕಳುಹಿಸಲಾಗಿತ್ತು.

ಆದರೀಗ ಪ್ರಿಯಾಂಕ್ ಮತ್ತೆ ಬಿಗ್ ಮನೆಗೆ ತೆರಳಲಿದ್ದಾರೆ, ಇದರೊಂದಿಗೆ ಡಿಂಚಕ್ ಪೂಜಾ ಕೂಡಾ ಎಂಟ್ರಿ ಕೊಡುವುದು ಖಚಿತವಾಗಿದೆ. ಈಗಾಗಲೇ ಹಿಂದಿ ಬಿಗ್'ಬಾಸ್ ಸೀಜನ್ 11 ಪ್ರತಿನಿತ್ಯದ ಜಗಳ ಹಾಗೂ ವಿವಾದಗಳಿಂದ ಸದ್ದು ಮಾಡುತ್ತಿದೆ. ಹೀಗಿಉರುವಾಗ ಇಬ್ಬರು ಒಳಹದರೆ ಅಲ್ಲಿನ ಪರಿಸ್ಥಿತಿ ಹೇಗಾಗಲಿದೆ ಎಂಬುವುದನ್ನು ಕಾದು ನೋಡಬೇಕಷ್ಟೇ.

ಡಿಂಚಕ್ ಪೂಜಾ ಹಾಡಿರುವ ಕೆಲ ಹಾಡುಗಳು ಇಲ್ಲಿವೆ ನೋಡಿ