ಬೆಂಗಳೂರು (ಡಿ. 13): ಬಹುಕಾಲದ ಪ್ರೇಮಿಗಳಾದ ದೂದ್‌ಪೇಡಾ ದಿಗಂತ್ ಹಾಗೂ ಗ್ಲಾಮರಸ್ ನಟಿ ಐಂದ್ರಿತಾ ರೇ ಬುಧವಾರ ಸತಿ-ಪತಿಗಳಾದರು. ಬೆಂಗಳೂರು ಹೊರವಲಯದ ನಂದಿಬೆಟ್ಟದ ತಪ್ಪಲಿನಲ್ಲಿರುವ ಡಿಸ್ಕವರಿ ವಿಲೇಜ್ ರೆಸಾರ್ಟ್‌ನಲ್ಲಿ ಬುಧವಾರ ಸಂಜೆ 6.30 ಕ್ಕೆ ಈ ಜೋಡಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿತು.

ಮದುವೆ ಮನೆಯಲ್ಲಿ ದಿಗಂತ್ -ಐಂದ್ರಿತಾ ರೊಮ್ಯಾನ್ಸ್ !

ಹವ್ಯಕ ಬ್ರಾಹ್ಮಣ ಹಾಗೂ ಬೆಂಗಾಲಿ ಸಂಪ್ರದಾಯದ ಪ್ರಕಾರ ವಿವಾಹ ಮಹೋತ್ಸವ ಕಾರ್ಯಕ್ರಮಗಳು ನಡೆದವು. ದಿಗಂತ್ ಹಾಗೂ ಐಂದ್ರಿತಾ ಕುಟುಂಬದವರು, ಬಂಧುಗಳು, ಸ್ನೇಹಿತರು ಸೇರಿದಂತೆ ಸ್ಯಾಂಡಲ್‌ವುಡ್‌ನ ಹಲವು ನಟ-ನಟಿಯರು, ನಿರ್ದೇಶಕರು ಹಾಗೂ ನಿರ್ಮಾಪಕರು ಈ ವಿವಾಹೋತ್ಸವಕ್ಕೆ ಸಾಕ್ಷಿಯಾದರು.

ದಿಗಂತ್ - ಐಂದ್ರಿತಾ ಮದುವೆ ವಿಶೇಷತೆಗಳೇನು ಗೊತ್ತಾ?

ಮುಹೂರ್ತಕ್ಕೂ ಮುನ್ನ ಡಿಸ್ಕವರಿ ವಿಲೇಜ್‌ನಲ್ಲೇ ಎರಡು ಕುಟುಂಬದವರಿಂದಲೂ ಮದುವೆ ಶಾಸ್ತ್ರಗಳು ನಡೆದವು. ನಟಿ ರಾಗಿಣಿ ಸೇರಿದಂತೆ ಸ್ಯಾಂಡಲ್‌ವುಡ್‌ನ ಹಲವು ನಟಿಯರು ನಟಿ ಐಂದ್ರಿತಾ ಅವರನ್ನು ಸಿಂಗಾರಗೊಳಿಸುವಲ್ಲಿ ನಿರತರಾಗಿದ್ದರು. ಇತ್ತ ದಿಗಂತ್ ಮನೆಯವರು ಹವ್ಯಕ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ನಡೆಸಬೇಕಿದ್ದ ಮದುವೆ ಶಾಸ್ತ್ರಗಳಲ್ಲಿ ನಿರತರಾಗಿದ್ದರು. ಸಂಜೆ ೬.೩೦ಕ್ಕೆ ವಿವಾಹ ಮುಹೂರ್ತ ನಡೆಯಿತು. ಮಂಗಳವಾರ ಅರಿಶಿಣ ಶಾಸ್ತ್ರ ನಡೆದಿತ್ತು. ನಟಿಯರಾದ ರಾಗಿಣಿ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಹೊರನಾಡು ಮತ್ತಿತರರು ಭಾಗವಹಿಸಿದ್ದರು.