ಬಾಲಿವುಡ್ ನಟಿ ಇಲಿಯಾನಾ ಡಿಸೋಜಾ ಆಗಾಗ್ಗೆ ತಮ್ಮ ಆಸ್ಟ್ರೇಲಿಯಾ ಗೆಳೆಯ, ಛಾಯಾಗ್ರಾಹಕ ಆ್ಯಂಡ್ರ್ಯೂ ನೀಬೋನ್ ಜೊತೆಗಿನ ಫೋಟೋಗಳನ್ನು ಆನ್ ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಲೇ ಇರುತ್ತಾರೆ.

ನವದೆಹಲಿ (ಡಿ.26): ಬಾಲಿವುಡ್ ನಟಿ ಇಲಿಯಾನಾ ಡಿಸೋಜಾ ಆಗಾಗ್ಗೆ ತಮ್ಮ ಆಸ್ಟ್ರೇಲಿಯಾ ಗೆಳೆಯ, ಛಾಯಾಗ್ರಾಹಕ ಆ್ಯಂಡ್ರ್ಯೂ ನೀಬೋನ್ ಜೊತೆಗಿನ ಫೋಟೋಗಳನ್ನು ಆನ್ ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಲೇ ಇರುತ್ತಾರೆ.

ಹೀಗಾಗಿ ಅವರು ಗೌಪ್ಯವಾಗಿ ಮದುವೆಯಾಗಿರುವ ಸಾಧ್ಯತೆ ಇದೆ ಎಂಬ ವದಂತಿಗಳೂ ಸಾಕಷ್ಟು ಸಲ ಹಬ್ಬಿದೆ. ಆದರೆ ಪ್ರತಿ ಬಾರಿಯೂ ಇಂಥ ಸುದ್ದಿಯನ್ನು ಅವರು ನಿರಾಕರಿಸುತ್ತಲೇ ಬಂದಿದ್ದಾರೆ. ಆದರೆ ಕ್ರಿಸ್‌ಮಸ್ ನಿಮಿತ್ತ ಇಲಿಯಾನಾ ಹಾಕಿರುವ ಚಿತ್ರ ಮಾತ್ರ ಬೇರೆಯದ್ದೇ ಕಥೆ ಹೇಳುತ್ತಿದೆ.

View post on Instagram

ಕ್ರಿಸ್‌ಮಸ್ ಮರಕ್ಕೆ ಶೃಂಗಾರ ಮಾಡುತ್ತಿರುವ ಫೋಟೋವನ್ನು ಇಲಿಯಾನಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಸ್ನೇಹಿತ ಆ್ಯಂಡ್ರೀ ನೀಬೋನ್‌ಗೆ ಫೋಟೋ ಕ್ರೆಡಿಟ್ ನೀಡಿದ್ದಾರೆ. ಅದೆಲ್ಲಕ್ಕಿಂತ ವಿಶೇಷವಾಗಿ ಈ ಬಾರಿ ಗೆಳೆಯನನ್ನು ಹಬ್ಬಿ ಎಂದು ಸಂಬೋಧಿಸಿದ್ದಾರೆ. ಹೀಗಾಗಿ ಇದು ವಿವಾಹವಾಗಿರುವ ಸುಳಿವು ಎನ್ನಲಾಗಿದೆ.