11 ವರ್ಷಗಳ ನಂತರ ಬೇರೆ ಬೇರೆಯಾದ ದಿಯಾ ಮಿರ್ಜಾ- ಸಾಹಿಲ್ | ಡಿವೋರ್ಸ್‌ಗೆ ಕಾರಣ ತಿಳಿದು ಬಂದಿಲ್ಲ | ಪರಸ್ಪರರ ನಿರ್ಧಾರವನ್ನು ಗೌರವಿಸುವುದಾಗಿ ಇಬ್ಬರೂ ಹೇಳಿದ್ದಾರೆ.  

ಮುಂಬೈ (ಆ. 02): ಬಾಲಿವುಡ್ ನಟಿ ದಿಯಾ ಮಿರ್ಜಾ (37) ಹಾಗೂ ಅವರ ಪತಿ ಸಾಹಿಲ್ ಸಂಘಾ (39) ತಮ್ಮ 11 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿ ಇಬ್ಬರೂ ಬೇರ್ಪಟ್ಟಿರುವುದಾಗಿ ಗುರುವಾರ ಜಂಟಿಯಾಗಿ ಘೋಷಣೆ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕುರಿತು ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ಘೋಷಣೆ ಮಾಡಿದ್ದು, ಆದರೆ ಮುಂದಿನ ದಿನಗಳಲ್ಲಿ ಸ್ನೇಹಿತರಾಗಿಯೇ ಮುಂದುವರೆಯಲಿದ್ದೇವೆ. ಪರಸ್ಪರರ ಜೀವನದ ಗುರಿ ಮತ್ತು ಅರ್ಥ ಬದಲಾದ ಹಿನ್ನೆಲೆ ಗೌರವಯುತವಾಗಿ ಬೇರೆ ಆಗಿದ್ದೇವೆ, ಪರಸ್ಪರರ ಅವಶ್ಯಕತೆ ಹಾಗೂ ಖಾಸಗಿತನ ಗೌರವಿಸಲು ಈ ನಿರ್ಧಾರ ಎಂದಿದ್ದಾರೆ. ವಿಚ್ಚೇದನಕ್ಕೆ ಕಾರಣ ತಿಳಿದು ಬಂದಿಲ್ಲ. 

View post on Instagram

ಪ್ರೀತಿ ತೋರಿದ, ಬೆಂಬಲಕ್ಕೆ ನಿಂತ ಕುಟುಂಬದವರು, ಸ್ನೇಹಿತರು ಹಾಗೂ ಮೀಡಿಯಾದವರಿಗೆ ಧನ್ಯವಾದಗಳು. ಈ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಬೇಕೆಂದು ನಾನು ಎಲ್ಲರಲ್ಲೂ ಕೇಳಿಕೊಳ್ಳುತ್ತೇನೆಂದು ವಿನಂತಿಸಿಕೊಂಡಿದ್ದಾರೆ.