ಮುಂಬೈ(ಸೆ.29): ಬೆಳಗಾವಿ ಮೂಲದ ಬೆಡಗಿ ಲಕ್ಷ್ಮಿ ರೈ ಅವರು ಕ್ರಿಕೆಟರ್ ಧೋನಿ ಅವರ ಜೀವನ ಆಧಾರಿತ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಧೋನಿ ಜತೆ ಆಪ್ತವಾಗಿದ್ದ ಕಾಲವನ್ನು ಸ್ಮರಿಸಿದ ಲಕ್ಷ್ಮಿ, ಈ ಬಗ್ಗೆ ಅತಿ ರಂಜಿತವಾಗಿ ಚಿತ್ರದಲ್ಲಿ ತೋರಿಸದಿದ್ದರೆ ಸಾಕು ಎಂದಿದ್ದಾರೆ. 

ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಹಾಗೂ ತಂಡದ ಪರ ರಾಯಭಾರಿಯಾಗಿದ್ದ ಲಕ್ಷ್ಮಿ ರೈ ನಡುವೆ 2008ರಲ್ಲಿ ಆಪ್ತತೆ ಬೆಳೆದಿತ್ತು.

ಇಬ್ಬರ ನಡುವಿನ ಗೆಳೆತನ ಇನ್ನೇನು ಪ್ರೇಮ ಪ್ರಕರಣವಾಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುವ ವೇಳೆಗೆ ಇಬ್ಬರು ಈ ಬಗ್ಗೆ ಸ್ಪಷ್ಟನೆ ನೀಡಿ ದೂರಾಗಿದ್ದರು. ಬ

ಬಯೋ ಪಿಕ್ ಬಗ್ಗೆ ಭಯಪಡುತ್ತಿರುವ ಪೈಕಿ ಲಕ್ಷ್ಮಿ ರೈ, ಈ ಚಿತ್ರದಲ್ಲಿ ತನ್ನ ವೃತ್ತಿಗೆ ಮಾರಕವಾಗುವ ಅಂಶಗಳು ಇಲ್ಲ ಎಂಬ ನಂಬಿಕೆ ಇದೆ ಎಂದಿದ್ದಾರೆ..