ಇತ್ತೀಚೆಗಷ್ಟೇ ಸ್ವಚ್ಛ ಭಾರತ ಅಭಿಯಾನದಡಿ ಸಂಸತ್ತಿನ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛತೆಯೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಇಲ್ಲದ ಕಸ ಗುಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗೆ ಆಹಾರವಾಗಿದ್ದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಬಗ್ಗೆ ಅವರ ಪತಿ ಧರ್ಮೇಂದ್ರ ಕಾಲೆಳೆದಿದ್ದರು. 

 

ನಿಜ ಜೀವನದಲ್ಲಿ ಹೇಮಾಮಾಲಿನಿ ಯಾವತ್ತಾದರೂ ಪೊರಕೆ ಹಿಡಿದಿದ್ದಾರಾ ಎಂದು ಧರ್ಮೇಂದ್ರರನ್ನು ಪ್ರಶ್ನಿಸಿದಾಗ, ‘ ಸಿನಿಮಾಗಳಲ್ಲಿ ಪೊರಕೆ ಹಿಡಿದಿದ್ದಾರೆ. ಆದರೆ ಮನೆಯಲ್ಲಿ ಹಿಡಿದಿದ್ದು ನಾನು ನೋಡಿಲ್ಲ. ನಾನು ಚಿಕ್ಕವನಿದ್ದಾಗ ಮನೆಗೆಲಸದಲ್ಲಿ ಅಮ್ಮನಿಗೆ ಹೆಲ್ಪ್ ಮಾಡುತ್ತಿದ್ದೆ. ಹಾಗಾಗಿ ಕಸ ಗುಡಿಸಲು ನನಗೆ ಬರುತ್ತದೆ ಎಂದು ಧರ್ಮೇಂದ್ರ’ ಕಾಲೆಳೆದಿದ್ದರು.

ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಾ, ಅವರು ಹೆಣ್ಣು ಎನ್ನುವ ಕಾರಣಕ್ಕೆ ಪೊರಕೆ ಹಿಡಿಯುವುದು ಗೊತ್ತಿರಬೇಕು ಎಂದೇನಿಲ್ಲ ಎಂದು ಹೇಳಿದ್ದಾರೆ. 

ಕೂಡಲೇ ಧರ್ಮೇಂದ್ರ ಪತ್ನಿಯ ಕ್ಷಮೆಯಾಚಿಸಿದ್ದಾರೆ. ‘ ನಾನು ಏನೋ ಹೇಳಲು ಹೋಗುತ್ತೇನೆ. ನಮ್ಮ ಸ್ನೇಹಿತರು ಇನ್ನೇನೋ ಅರ್ಥ ಮಾಡಿಕೊಳ್ಳುತ್ತಾರೆ. ನಾನೇನೇ ಹೇಳಿದ್ದರೂ ಕ್ಷಮೆಯಾಚಿಸುತ್ತೇನೆ. ಇನ್ನೊಮ್ಮೆ ಇದು ರಿಪೀಟ್ ಆಗುವುದಿಲ್ಲ ಎಂದಿದ್ದಾರೆ.