ಬೆಂಗಳೂರು(ಅ.06): ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪುತ್ರ ನಿಖಲ್ ಅಭಿನಯದ ಚೊಚ್ಚಲ ಚಿತ್ರ ವಿಶ್ವದಾದ್ಯಂತ ಜಾಗ್ವಾರ್ ಚಿತ್ರ ರಿಲೀಸ್ ಆಗಿದೆ. ಬೆಂಗಳೂರಿನ ಸಂತೋಷ್​​​ ಚಿತ್ರ ಮಂದಿರದಲ್ಲಿ ಜಾಗ್ವರ್​​ ಸಿನಿಮಾ ಬಿಡುಗಡೆಯಾಗಿದ್ದು, ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಚಿತ್ರಮಂದಿರಕ್ಕೆ ಆಗಮಿಸಿದರು.

Add Asianetnews Kannada as a Preferred SourcegooglePreferred

ದೇವೇಗೌಡರ ಆಗಮನ ಹಿನ್ನೆಲೆಯಲ್ಲಿ ಡೊಳ್ಳ ಕುಣಿತದ ಸಂಭ್ರಮ ಮನೆ ಮಾಡಿದೆ. ಸಂತೋಷ್​​ ಚಿತ್ರಮಂದಿರದ ಮುಂದೆ ನಿಖಿಲ್​​ ಹಾಗೂ ಹೆಚ್ಡಿಕೆ ಕಟೌಟ್​​ ಹಾಕಲಾಗಿದೆ.

ಇತ್ತ ಮಂಡ್ಯದಲ್ಲಿ ಜಾಗ್ವಾರ್ ಚಿತ್ರಕ್ಕೆ ಭರ್ಜರಿ ಓಪನಿಂಗ್ ಕಂಡಿದ್ದು, ಗುರುಶ್ರೀ ಚಿತ್ರಮಂದಿರ ಬಳಿ ಪಟಾಕಿ ಸಿಡಿಸಿ ಸಂಭ್ರಮ ಆಚರಣೆ ಮಾಡಲಾಯಿತು.

ಸಂಸದ ಪುಟ್ಟರಾಜುನಿಂದ ನಿಖಿಲ್ ಅಭಿಮಾನಿ ಸಂಘದ ಕಚೇರಿ ಉದ್ಘಾಟನೆ ಮಾಡಲಾಯ್ತು. ಮೊದಲ ಪ್ರದರ್ಶನ ಚಿತ್ರವೀಕ್ಷಣೆಗೆ ಬಂದ ಪ್ರೇಕ್ಷಕರಿಗೆ ಜೆಡಿಎಸ್ ಕಾರ್ಯಕರ್ತರು ಕಬ್ಬಿನ ಹಾಲು ಹಾಗೂ ಲಾಡು ನೀಡಲಾಯಿತು.