ನ.19ರಂದು ನಟಿ ದೀಪಿಕಾ, ರಣವೀರ್‌ ಸಿಂಗ್‌ ಮದುವೆ?

First Published 25, May 2018, 8:49 AM IST
Deepika Padukone-Ranveer Singh to tie the knot on November 19
Highlights

ಬಾಲಿವುಡ್‌ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ಮದುವೆ ಯಾವಾಗ ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು, ನ.19ರಂದು ಇವರಿಬ್ಬರೂ ಹಸೆಮಣೆ ಏರಲಿದ್ದಾರೆ ಎಂದು ಸಿನಿ ಪತ್ರಿಕೆ ‘ಫಿಲ್ಮ್‌ ಫೇರ್‌’ ವರದಿ ಮಾಡಿದೆ. 
 


ನವದೆಹಲಿ: ಬಾಲಿವುಡ್‌ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ಮದುವೆ ಯಾವಾಗ ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು, ನ.19ರಂದು ಇವರಿಬ್ಬರೂ ಹಸೆಮಣೆ ಏರಲಿದ್ದಾರೆ ಎಂದು ಸಿನಿ ಪತ್ರಿಕೆ ‘ಫಿಲ್ಮ್‌ ಫೇರ್‌’ ವರದಿ ಮಾಡಿದೆ. 

ಆದರೆ, ದೀಪಿಕಾ ಪಡುಕೋಣೆ ಅಥವಾ ರಣವೀರ್‌ ಸಿಂಗ್‌ ಈ ಸುದ್ದಿಯನ್ನು ಖಚಿತಪಡಿಸಿಲ್ಲ. ವಿವಾಹದ ಕುರಿತ ಸುದ್ದಿಯನ್ನು ತಾವೇ ಮೊದಲು ಬಹಿರಂಗಪಡಿಸುವುದಾಗಿ ರಣವೀರ್‌ಸಿಂಗ್‌ ಸ್ಪಷ್ಟನೆ ನೀಡಿದ್ದಾರೆ. 

ಈ ಹಿಂದೆ ದೀಪಿಕಾ ಪಡುಕೋಣೆಯ ಬಗ್ಗೆ ರಣವೀರ್‌ ಸಿಂಗ್‌ ಬಹಿರಂಗವಾಗಿ ಪ್ರೀತಿ ವ್ಯಕ್ತಪಡಿಸಿದ್ದರು. ಇಬ್ಬರೂ ಸ್ವಿಜರ್ಲೆಂಡ್‌ನಲ್ಲಿ ಮದುವೆ ಆಗಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.

loader