ನವದೆಹಲಿ(ನ.14): ಹಾಲಿವುಡ್ ಹೊಕ್ಕಿ ಬಂದ ದೀಪಿಕಾ ಈಗ ಇರಾನಿಯನ್ ಚಿತ್ರಕ್ಕೆ ಟಿಕೆಟ್ ಪಡೆದಿದ್ದಾರೆ. ಹೆಸರಾಂತ ನಿರ್ದೇಶಕ ಮಜಿದ್ ಮಜಿದಿಯ ನಿರ್ದೇಶನದ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಮಜಿದ್ ಮಜಿದಿ ಯಾವತ್ತೂ ಹಾಟ್ ಹಾಟ್ ಚಿತ್ರಕ್ಕೆ ಕೈಹಾಕಿದವರಲ್ಲ. ಆದರೆ, ಹಾಟ್ ದೀಪಿಕಾರನ್ನೇ ಈ ಚಿತ್ರದಲ್ಲಿ ತೋರಿಸುತ್ತಾರಾ?

ಖಂಡಿತಾ ಇಲ್ಲ! ಇಲ್ಲಿ ದೀಪಿಕಾ ಸ್ಲಮ್ ಹುಡುಗಿ. ದೀಪಿಕಾ ಇಲ್ಲಿ ಕೆದರಿದ ಕೂದಲಿನಲ್ಲಿ, ಮಾಸಿದ ಮತ್ತು ಹರಿದ ಬಟ್ಟೆಯಲ್ಲಿ, ಕಳೆಗುಂದಿದ ಕಣ್ಣುಗಳಿಂದ ಕಾಣಿಸುತ್ತಾರಂತೆ. ಮುಂಬೈನ ಸ್ಲಮ್‌ಗಳಲ್ಲಿ ಈಗಾಗಲೇ ಚಿತ್ರೀಕರಣ ಸಾಗಿದ್ದು, ಮುಂದೆ ಡೆಲ್ಲಿ, ರಾಜಸ್ಥಾನ ಹಾಗೂ ಕಾಶ್ಮೀರದಲ್ಲೂ ಶೂಟಿಂಗ್ ನಡೆಯಲಿದೆ. ‘ಚಿಲ್ಡ್ರನ್ ಆ್ ಹೆವೆನ್’ನಂಥ ಅವಾರ್ಡ್ ಚಿತ್ರ ತೆಗೆದ ಮಜಿದಿ, ಇಲ್ಲೂ ದೀಪಿಕಾ ಪಡುಕೋಣೆಗೆ ಅವಾರ್ಡ್ ಕೊಡಿಸ್ತಾರಾ? ಈ ಕುತೂಹಲ ನಿಜವಾಗಲಿ ಅನ್ನೋದು ಅಭಿಮಾನಿಗಳ ಹಾರೈಕೆ.