ಇಟಲಿಯಲ್ಲಿ ಮದುವೆಯದ ಬಾಲಿವುಡ್‌ನ ತಾರಾ ಜೋಡಿ ದೀಪಿಕಾ ಹಾಗೂ ರಣವೀರ್ ಸಿಂಗ್ ಕೊನೆಗೂ ಮುಂಬೈಗೆ ಬಂದಿಳಿದಿದ್ದಾರೆ. ಹಣೆಗೆ ಕಡುಗೆಂಪು ಬಣ್ಣದ ಸಿಂಧೂರವಿಟ್ಟು ಕಂಗೊಳಿಸುತ್ತಿದ್ದ ದೀಪಿಕಾ ತನ್ನ ಗಂಡ ರಣವೀರ್ ಸಿಂಗ್ ಕೈ ಹಿಡಿದು ಅಭಿಮಾನಿಗಳೆದುರು ಬಂದು ಧನ್ಯವಾದ ತಿಳಿಸಿದ್ದಾರೆ. ಆದರೆ ಇದೆಲ್ಲದರ ನಡುವೆ ದೀಪಿಕಾ-ರಣ್ ವೀರ್ ಮೀಸೆ ಕತ್ತರಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದೀಪಿಕಾ ಪಡುಕೋಣೆ ಹೊಸ ಪತಿಗೆ ಈಗಲೇ ಕಾಟ ಕೊಡಲು ಆರಂಭಿಸಿದ್ದಾರೆ.. ಹೌದು ಈ ವಿಡಿಯೋ ಎಲ್ಲವನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದೆ. ಆದರೆ ಇದರ ಮೂಲ 2015. 2015ರ ವಿಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಬೆಂಗಳೂರು ಲೀಲಾಪ್ಯಾಲೇಸ್‌ನಲ್ಲೇ ದೀಪಿಕಾ ರಿಸೆಪ್ಷನ್‌, ಸ್ಥಳ ಆಯ್ಕೆಗಿದೆ ವಿಶೇಷ ಕಾರಣ!

ನವ ದಂಪತಿಯ ಮದುವೆ ಫೋಟೋಗಳು ಎಲ್ಲರ ಕಣ್ಮನ ಸೆಳೆದಿದ್ದವು. ಬಾಲಿವುಡ್ ತಾರೆಯರ ಮದುವೆಯು ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು. ಆರತಕ್ಷತೆ ಕಾರ್ಯಕ್ರಮವು 21ರಂದು ಬೆಂಗಳೂರು ಹಾಗೂ 28ರಂದು ಮುಂಬೈನಲ್ಲಿ ನಡೆಯಲಿದ್ದು ಆಪ್ತರಿಗೆ ಆಹ್ವಾನ ನೀಡಲಾಗಿದೆ.

View post on Instagram