ಬಾಲಿವುಡ್ ತಾರಾ ಜೋಡಿಗಳಾಗಿರುವ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮದುವೆ ವಿಚಾರ ಬಾಲಿವುಡ್ ಅಂಗಳದಲ್ಲಿ ಓಡಾಡುತ್ತಿದೆ.
ನವದೆಹಲಿ (ಮಾ. 07): ಬಾಲಿವುಡ್ ತಾರಾ ಜೋಡಿಗಳಾಗಿರುವ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮದುವೆ ವಿಚಾರ ಬಾಲಿವುಡ್ ಅಂಗಳದಲ್ಲಿ ಓಡಾಡುತ್ತಿದೆ.
ಇದೀಗ ಇವರಿಬ್ಬರ ಮದುವೆ ವಿಚಾರ ಟ್ರೆಂಡ್ ಆಗಿದೆ. ಗಾಸಿಪ್ ನಿಜವಾಗುವ ಸಮಯ ಹತ್ತಿರ ಬಂದಿದೆ. ಎರಡೂ ಕಡೆ ಪೋಷಕರು ಭೇಟಿಯಾಗಿದ್ದಾರೆ. ವಿವಾಹದ ಬಗ್ಗೆ ಮಾತುಕತೆ ನಡೆಸಿದ್ದಾರೆ. ದಿನಾಂಕವನ್ನು ಫಿಕ್ಸ್ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಟ್ವೀಟ್’ಗಳು ಹರಿದಾಡುತ್ತಿದ್ದು, ಇವರಿಬ್ಬರ ಮದುವೆ ಫಿಕ್ಸ್ ಆಗಿಯೇ ಹೋಗಿದೆ ಎಂಬ ಅನುಮಾನ ಹುಟ್ಟುಹಾಕಿದೆ. ಆದರೆ ಈ ಬಗ್ಗೆ ಕುಟುಂಬದವರು ಇನ್ನೂ ಅಧಿಕೃತಗೊಳಿಸಿಲ್ಲ.
