ಬಾಲಿವುಡ್‌ ತಾರೆಯರಾದ ರಣವೀರ್‌ ಸಿಂಗ್‌ ಮತ್ತು ದೀಪಿಕಾ ಪಡುಕೋಣೆ ವಿವಾಹ ಕುರಿತ ಊಹಾಪೋಹಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ವರದಿಯೊಂದನ್ನು ನಂಬುವುದಾದರೆ, ತಾರಾ ಜೋಡಿಯು ತಮ್ಮ ಆಪ್ತರಲ್ಲಿ ಮದುವೆ ದಿನಾಂಕ ಹಂಚಿಕೊಂಡಿದ್ದಾರೆ.

ನವದೆಹಲಿ: ಬಾಲಿವುಡ್‌ ತಾರೆಯರಾದ ರಣವೀರ್‌ ಸಿಂಗ್‌ ಮತ್ತು ದೀಪಿಕಾ ಪಡುಕೋಣೆ ವಿವಾಹ ಕುರಿತ ಊಹಾಪೋಹಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. 

ವರದಿಯೊಂದನ್ನು ನಂಬುವುದಾದರೆ, ತಾರಾ ಜೋಡಿಯು ತಮ್ಮ ಆಪ್ತರಲ್ಲಿ ಮದುವೆ ದಿನಾಂಕ ಹಂಚಿಕೊಂಡಿದ್ದಾರಂತೆ. ಆ ಪ್ರಕಾರ, ನವೆಂಬರ್‌ 12- - 16ರ ನಡುವೆ ಮದುವೆ ನಡೆಯಲಿದೆ ಎನ್ನಲಾಗಿದೆ. 

ಈ ದಿನಗಳಲ್ಲಿ ಇತರ ಯಾವುದೇ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳದಂತೆ ರಣವೀರ್‌ ಮತ್ತು ದೀಪಿಕಾ ತಮ್ಮ ಆಪ್ತರಿಗೆ ಮುನ್ಸೂಚನೆ ನೀಡಿದ್ದಾರೆ. ವಿರಾಟ್‌ ಕೊಹ್ಲಿ, ಅನುಷ್ಕಾ ಶರ್ಮಾರಂತೆ ರಣವೀರ್‌-ದೀಪಿಕಾ ಮದುವೆಯೂ ಇಟಲಿಯಲ್ಲೇ ನಡೆಯಲಿದೆ. 

ಮದುವೆ ತುಂಬಾ ಖಾಸಗಿಯಾಗಿ ನಡೆಯಲಿದ್ದು, ಬಳಿಕ ಮುಂಬೈಯಲ್ಲಿ ಅದ್ದೂರಿ ಸತ್ಕಾರ ಕೂಟ ನಡೆಯಲಿದೆ ಎನ್ನಲಾಗಿದೆ.