ಹೊಸ ಚಿತ್ರ ಅಥವಾ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸಾಮಾಜಿಕ ಜಾಲತಾಣಗಳ ಅಡ್ಮಿನ್‌ಗಳು ಕೆಟ್ಟದಾಗಿ ಪೋಸ್ಟ್ ಹಾಕಿ, ವಿವಾದ ಸೃಷ್ಟಿಸುತ್ತಿರುವುದು ಹೆಚ್ಚುತ್ತಿದೆ. ಇದರಿಂದ ನಟ-ನಟಿಯರ ನಡುವೆಯೇ ವೈಷಮ್ಯಗಳು ಹೆಚ್ಚಾಗುತ್ತಿವೆ. ಇದರಿಂದ ಅಭಿಮಾನಿಗಳ ನಡುವೆ ಕಿತ್ತಾಟವೂ ಹೆಚ್ಚುತ್ತಿದೆ. ಈ ಎಲ್ಲ ಪ್ರಕ್ರಿಯೆಗಳಿಗೆ ಬ್ರೇಕ್ ಹಾಕಲು ಸೋಷಿಯಲ್ ಮೀಡಿಯಾ ಅಡ್ಮಿನ್‌ಗಳು ನಿರ್ಧರಿಸಿದ್ದಾರೆ.

ಬೆಂಗಳೂರು (ಜು.26): ಸದ್ದಿಲ್ಲದ ಸುದ್ದಿಗಳ ಟ್ರೋಲ್ ಮಾಡುವ ಪೆಜ್‌ಗಳಿಗೆ ಫುಲ್ ಸ್ಟಾಪ್ ಇಡಲು ಕೈ ಜೋಡಿಸಲಿದ್ದಾರೆ ಸ್ಯಾಂಡಲ್‌ವುಡ್ ನಟ- ನಟಿಯರು. 

ಇಂಥ ಪೋಸ್ಟ್ ಹಾಕದಂತೆ ನಟ-ನಟಿಯರ ಸೋಷಿಯಲ್ ಮೀಡಿಯಾ ಅಡ್ಮಿನ್‌ಗಳ ಸಭೆಯೊಂದು ನಡೆದಿದೆ. ದರ್ಶನ್ ಸಮ್ಮುಖದಲ್ಲಿಯೇ ಸಭೆ ನಡೆದಿದ್ದು, ದರ್ಶನ್ ಫ್ಯಾನ್ಸ್ ಇಂಥ ಚಟುವಟಿಕೆಗಳಿಗೆ ಫುಲ್ ಸ್ಟಾಪ್ ನೀಡುವಂತೆ ಮನವಿ ಮಾಡಿದ್ದಾರೆ. ಇನ್ನು ಮುಂದೆ ಸ್ಟಾರ್ ನಟರ ಅಭಿಮಾನಿಗಳನ್ನು ಉದ್ವೇಗಗೊಳಿಸದಂತೆ, ಎಚ್ಚರದಿಂದ ಇರಲು ನಿರ್ಧರಿಸಲಾಯಿತು. ಇನ್ನು ಮುಂದೆ ಯಾವುದೇ ಟ್ರೋಲ್‌ಗಳನ್ನು ಪ್ರೋತ್ಸಾಹಿಸದಂತೆ ಎಲ್ಲರೂ ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ.