ಮಂಡ್ಯ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಬ್ಯುಸಿ ಆಗಿರುವ ದರ್ಶನ್, ಸುಮಲತಾ, ಯಶ್ ಹಾಗೂ ಅಭಿಷೇಕ್ ಗೆ ಈಗ ಕರ್ನಾಟಕವೇ ಬೆಂಬಲ ನೀಡುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು.

 

ಪ್ರಚಾರ ಮಾಡುವಾಗ ಹಳ್ಳಿವೊಂದಕ್ಕೆ ದರ್ಶನ್ ಭೇಟಿ ನೀಡಿದರು. ಅಲ್ಲಿನ ಯೋಧನ ಸ್ನೇಹಿತನೊಬ್ಬ ವಿಡಿಯೋ ಕಾಲ್ ಮಾಡಿ ದರ್ಶನ್ ಗೆ ನೀಡಿದರು. ಭಾರತದ ಯಾವ ಗಡಿಯಲ್ಲಿರುವ ಯೋಧ ಎಂದು ತಿಳಿದು ಬಂದಿಲ್ಲ. ಆದರೆ ಕರೆ ಮಾಡಿದಾಗ ‘ಸುಮಲತಾ ಅಂಬರೀಶ್ ಗೆ ನಮ್ಮ ಸಂಪೂರ್ಣ ಬೆಂಬಲ ಹಾಗೂ ನಿಮಗೆ ಒಳ್ಳೆಯದಾಗುತ್ತದೆ’ ಎಂದು ಹೇಳಿದ್ದಾರೆ. ಅದಕ್ಕೆ ದರ್ಶನ್ ‘ನೀವು ನಮ್ಮ ಮೇಲೆ ಇಟ್ಟಿರುವ ನಂಬಿಕೆ ಹಾಗೂ ಈ ಮಾತು ನಮಗೆ ಇನ್ನಷ್ಟು ಶಕ್ತಿ ನೀಡಿದೆ’ ಎಂದು ಹೇಳಿದ್ದಾರೆ.

ಪ್ರಚಾರದ ವೇಳೆ ಅಡ್ಡಗಟ್ಟಿದ ಶಿವನಂದಿ; ದರ್ಶನ್ ಮಾಡಿದ್ದೇನು ಗೊತ್ತಾ?

ಇನ್ನು ಪ್ರಚಾರದ ವೇಳೆ ಅಭಿಮಾನಿಯೊಬ್ಬ ತನ್ನ ಹೊಸ ಬೈಕ್ ದರ್ಶನ್ ಓಡಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಒಂದು ಕ್ಷಣ ಯೋಚನೆ ಮಾಡದೆ ಬೈಕೇರಿ ಒಂದು ರೌಂಡ್ ಸವಾರಿ ಮಾಡಿದ್ದು ಅಭಿಮಾನಿಗೆ ಸಂತಸ ನೀಡಿದೆ