ದರ್ಶನ್ 'ಆಂಜನೇಯ' ಆಗ್ತಾರಾ?

First Published 11, Jan 2018, 1:39 PM IST
Darshan Next Film
Highlights

ನಟ ದರ್ಶನ್ ಅವರಿಗೆ ಪ್ರೇಮ್ ನಿರ್ದೇಶನ ಮಾಡಲಿರುವ ಚಿತ್ರಕ್ಕೆ ‘ಆಂಜನೇಯ’ ಎನ್ನುವ ಹೆಸರಿಡುವುದಕ್ಕೆ ನಿರ್ಧರಿಸಲಾಗಿದೆಯಂತೆ.

ಬೆಂಗಳೂರು (ಜ.11): ನಟ ದರ್ಶನ್ ಅವರಿಗೆ ಪ್ರೇಮ್ ನಿರ್ದೇಶನ ಮಾಡಲಿರುವ ಚಿತ್ರಕ್ಕೆ ‘ಆಂಜನೇಯ’ ಎನ್ನುವ ಹೆಸರಿಡುವುದಕ್ಕೆ ನಿರ್ಧರಿಸಲಾಗಿದೆಯಂತೆ.

ಹೌದು, ಉಮಾಪತಿ ನಿರ್ಮಾಣ ಮಾಡಲಿರುವ ಪ್ರೇಮ್ ನಿರ್ದೇಶನದ ಚಿತ್ರವಿದು. ‘ದಿ ವಿಲನ್’ ಚಿತ್ರದ ನಂತರ ಪ್ರೇಮ್ ಅವರು ದರ್ಶನ್ ಅವರಿಗೆ ಸಿನಿಮಾ ನಿರ್ದೇಶಿಸಲಿದ್ದಾರೆ. ‘ಕರಿಯ’ ಚಿತ್ರದ ನಂತರ ಮತ್ತೊಮ್ಮೆ ಜೊತೆಯಾಗುತ್ತಿರುವ ಪ್ರೇಮ್ ಹಾಗೂ ದರ್ಶನ್ ಜೋಡಿಯ ಚಿತ್ರಕ್ಕೆ ‘ಅಂಜನೇಯ’ ಎನ್ನುವ ಹೆಸರು ಪಕ್ಕಾ ಮಾಡಿಕೊಂಡಿದ್ದಾರೆ. ಆದರೆ, ಪ್ರೇಮ್ ಅವರು ತಾವು ನಿರ್ದೇಶಿಸುವ ಚಿತ್ರದ ಹೆಸರಿನಿಂದಲೇ ಸಿನಿಮಾ ಮಾರುಕಟ್ಟೆ ಮಾಡುವ ತಂತ್ರಗಾರ. ಆದರೆ, ಈಗ ಚಿತ್ರದ ಹೆಸರು ಬಹಿರಂಗವಾಗಿರುವುದರಿಂದ ‘ಆಂಜನೇಯ’ ಎನ್ನುವ ಹೆಸರು ಬದಲಾಗುವ  ಸಾಧ್ಯತೆಗಳು ಇವೆ.

 

loader