ಟಗರು-2 ನಲ್ಲಿ ಶಿವಣ್ಣ ಜೊತೆ ದರ್ಶನ್ ಅಭಿನಯಿಸ್ತಾರಾ?

Darshan Acting in Tagaru 2
Highlights

‘ಟಗರು’ ಓಟದಿಂದಾಗಿ ನಿರ್ದೇಶಕ ಸೂರಿ ಥ್ರಿಲ್  ಆಗಿದ್ದಾರೆ. ಹಾಗಾಗಿ ಗಾಂಧಿನಗರದಲ್ಲಿ ‘ಟಗರು 2’ ಟಾಕ್ ಶುರುವಾಗಿದೆ. ಅಭಿಮಾನಿಗಳ ನಿರೀಕ್ಷೆಗೆ ಪೂರಕವಾಗಿ ‘ಟಗರು 2’ ಬರುವುದು ಖಚಿತ ಅಂತ ನಿರ್ದೇಶಕ
ಸೂರಿಯವರೇ ಹೇಳಿಕೊಂಡಿರುವುದು  ಮತ್ತಷ್ಟು ಕುತೂಹಲ ಹುಟ್ಟಿಸಿದೆ.

ಬೆಂಗಳೂರು (ಮಾ.07): ‘ಟಗರು’ ಓಟದಿಂದಾಗಿ ನಿರ್ದೇಶಕ ಸೂರಿ ಥ್ರಿಲ್  ಆಗಿದ್ದಾರೆ. ಹಾಗಾಗಿ ಗಾಂಧಿನಗರದಲ್ಲಿ ‘ಟಗರು 2’ ಟಾಕ್ ಶುರುವಾಗಿದೆ. ಅಭಿಮಾನಿಗಳ ನಿರೀಕ್ಷೆಗೆ ಪೂರಕವಾಗಿ ‘ಟಗರು 2’ ಬರುವುದು ಖಚಿತ ಅಂತ ನಿರ್ದೇಶಕ
ಸೂರಿಯವರೇ ಹೇಳಿಕೊಂಡಿರುವುದು  ಮತ್ತಷ್ಟು ಕುತೂಹಲ ಹುಟ್ಟಿಸಿದೆ.

ಅಂದಹಾಗೆ, ‘ಟಗರು’ ಬಿಡುಗಡೆಗೂ  ಮುನ್ನವೇ ಅದರ ಸೀಕ್ವೆಲ್ ಬಗ್ಗೆ  ಸುಳಿವು ಕೊಟ್ಟಿದ್ದರು ಸೂರಿ. ಅವರೇ  ಈಗ ಆ ಬಗ್ಗೆ ಮಾತನಾಡಿದ್ದಾರೆ. ‘ಟಗರು 2 ಬರುವುದು ಖಚಿತ. ಆದರೆ, ಅದು ಯಾವಾಗ, ಹೇಗೆ ಅಂತೆಲ್ಲ ಟೈಮ್ ನಿಗದಿ  ಮಾಡಿಕೊಂಡಿಲ್ಲ. ಸ್ಟೋರಿ ಲೈನ್ ಇದೆ. ಅದರ ಸುತ್ತ ಕೆಲಸ ಮಾಡಬೇಕಿದೆ. ಮುಖ್ಯವಾಗಿ ಶಿವಣ್ಣ ಅವರ ಕಾಲ್‌ಶೀಟ್  ಬೇಕಿದೆ. ಇವೆಲ್ಲ ಸುಲಭದ ಕೆಲಸ ಅಲ್ಲ. ಎಲ್ಲವೂ ರೆಡಿ ಆದ ಮೇಲೆ ಟಗರು 2 ಕೆಲಸ’ ಅಂತ ಟಗರು ಚಿತ್ರದ ಸಕ್ಸಸ್
ಮೀಟ್‌ನಲ್ಲಿ ಹೇಳಿದರು. ಮತ್ತೊಂದೆಡೆ ಶಿವರಾಜ್ ಕುಮಾರ್, ‘ಟಗರು 2 ಬಗ್ಗೆ ಸೂರಿ ಅವರೊಂದಿಗೆ  ಸಾಕಷ್ಟು ಮಾತನಾಡ ಬೇಕಿದೆ. ಆ ಚರ್ಚೆ ನಡೆದಿದೆ’ ಎಂದರು.

ಇಂಟರೆಸ್ಟಿಂಗ್ ಅಂದ್ರೆ ಶಿವರಾಜ್ ಕುಮಾರ್ ಜತೆಗೆ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಾರೆನ್ನುವ ಸುದ್ದಿ  ಹರಡಿದೆ. 

loader