. ದಂಡುಪಾಳ್ಯ-3 ಸಿನಿಮಾ ಈ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಈ ಸಿನಿಮಾ ಮೂಲಕ ಕ್ರೈಂ ಲೋಕದ ರೋಚಕ ಕತೆಯನ್ನು ತೆರೆದಿಡಲಾಗುವುದು

ರಾಯಚೂರು(ಡಿ.05): ಕಳೆದ ವಿಧಾನಸಭಾ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ನಟಿ ಪೂಜಾ ಗಾಂಧಿ ಸೋಮವಾರ ಇಲ್ಲಿನ ಎರಡನೇ ಜೆಎಂಎಫ್ ನ್ಯಾಯಾಲಯಕ್ಕೆ ಹಾಜರಾದರು.

ತೀರ್ಪು ಪ್ರಕಟಣೆಯನ್ನು ಡಿ.13ಕ್ಕೆ ಮುಂದೂಡಲಾಗಿದೆ ಎಂದು ವಕೀಲರು ತಿಳಿಸಿದರು. ಈ ನಡುವೆ ಸುದ್ದಿಗಾರರ ಜತೆ ಮಾತನಾಡಿದ ಪೂಜಾ, ಸದ್ಯಕ್ಕೆ ಮತ್ತೆ ರಾಜಕಾರಣಕ್ಕೆ ಬರುವ ಉದ್ದೇಶವಿಲ್ಲ. ಮದುವೆ ಬಗ್ಗೆ ಯೋಚಿಸುತ್ತಿದ್ದು, ಶೀಘ್ರ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಡಲಿದ್ದೇನೆ ಎಂದು ಹೇಳಿದರು. ದಂಡುಪಾಳ್ಯ-3 ಸಿನಿಮಾ ಈ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಈ ಸಿನಿಮಾ ಮೂಲಕ ಕ್ರೈಂ ಲೋಕದ ರೋಚಕ ಕತೆಯನ್ನು ತೆರೆದಿಡಲಾಗುವುದು ಎಂದರು.