ಬಿಗ್‌ ಬಾಸ್‌ ಮನೆಯಲ್ಲಿ ಮೊಬೈಲ್ ರಿಂಗಣಿಸಿದ ಬೆನ್ನಲೆ ಮತ್ತೊಂದು ಜಗಳ ನಡೆದಿದ್ದು, ಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿದೆ

ಬೆಂಗಳೂರು(ನ.04): ಬಿಗ್‌ ಬಾಸ್‌ ಮನೆಯಲ್ಲಿ ಮೊಬೈಲ್ ರಿಂಗಣಿಸಿದ ಬೆನ್ನಲೆ ಮತ್ತೊಂದು ಜಗಳ ನಡೆದಿದ್ದು, ಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿದೆ. ನಿನ್ನೆ ನಡೆದ ಡ್ಯಾನ್ಸ್‌ ಜಗಳದಲ್ಲಿ ಒಳ್ಳೆ ಹುಡುಗ ಪ್ರಥಮ್'ಗೆ ಬಿದ್ದಿದೆ ಒದೆ.

ಬಿಗ್ ಬಾಸ್ ಆದೇಶದಂತೆ ಒಂದೇ ವೇದಿಕೆಯಲ್ಲಿ ಎರಡು ಚಿತ್ರಗೀತೆಗಳಿಗೆ ಡ್ಯಾನ್ಸ್ ಮಾಡಬೇಕಾದ ಸಂದರ್ಭದಲ್ಲಿ ಇಬ್ಬರು ಸದಸ್ಯರು ಒಟ್ಟಿಗೆ ಸ್ಟೇಜ್‌'ನಲ್ಲಿರ ಬೇಕಾಗಿತ್ತು. ಆಗ ಸಂಜನಾ ಮತ್ತು ಪ್ರಥಮ್‌ ಒಂದೇ ವೇದಿಕೆಯ ಮೇಲೆ ಎರಡು ಬಾರಿ ಎದುರಾದರು.

ಎರಡೂ ಮೂರು ಬಾರಿ ಎದುರಾದ ಸಂದರ್ಭದಲ್ಲಿ ಸಂಜನಾಗೆ ಪ್ರಥಮ್‌ ಇರಿಟೆಟ್ ಮಾಡಿದ್ದಾನೆ. ಇದೇ ಸಂದರ್ಭದಲ್ಲಿ ಮನೆಯ ಹಿರಿಯರು ನೆಕ್ಸ್ ಟೆಮ್ ಅದೇ ರೀತಿ ಮಾಡಿದರೆ ಹೊಡೆಯುವಂತೆ ಸಂಜನಾಗೆ ಹೇಳಿಕೊಡುತ್ತಾರೆ. ಹಾಗೇಯೇ ಮಾಡು ಸಂಜನಾ ಪ್ರಥಮ್‌ ಎದೆಗೆ ಮೊಣಕೈಯಿಂದ ಹೊಡೆದಿದ್ದಾರೆ. ಇದರಿಂದ ಪ್ರಥಮ್ ಗೆ ನೋವಾಗಿದೆ.