ಪಾವತಿ ವಿಚಾರದಲ್ಲಿ 2 ಲಕ್ಷ ರೂ. ವಂಚನೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.2013ರಲ್ಲೇ ಮೊತ್ತವನ್ನು ಬಡ್ಡಿ ಸಹಿತ ಪಾವತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದ್ದರೂ ತಾನು ಅದನ್ನು ಪಾಲಿಸಿರಲಿಲ್ಲ.

ಚೆನ್ನೈ(ನ.2): ತಮಿಳು ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕಬಾಲಿ ನಿರ್ಮಾಪಕ ಕಲೈಪ್ಪುಲಿ ಎಸ್.ತಾನು ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ, ಚೆನ್ನೈನ ಸಿಟಿ ಸಿವಿಲ್ ಕೋರ್ಟ್ ಈ ಆದೇಶ ಹೊರಡಿಸಿದೆ. ಕನ್ಯಾಕುಮಾರಿಯ ಚಿತ್ರಮಂದಿರದ ಮಾಲೀಕ ಡೇವಿಡ್ ಅವರಿಗೆ 2009ರಲ್ಲಿ ತಿರುಮಗನ್ ಚಿತ್ರಕ್ಕೆ ಸಂಬಂಧಿಸಿದಂತೆ ಪಾವತಿ ವಿಚಾರದಲ್ಲಿ 2 ಲಕ್ಷ ರೂ. ವಂಚನೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.2013ರಲ್ಲೇ ಮೊತ್ತವನ್ನು ಬಡ್ಡಿ ಸಹಿತ ಪಾವತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದ್ದರೂ ತಾನು ಅದನ್ನು ಪಾಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ನ.22ರೊಳಗೆ ಬಂಧಿಸಿ ಹಾಜರುಪಡಿಸುವಂತೆ ಪೊಲೀಸರಿಗೆ ಕೋರ್ಟ್ ಆದೇಶಿಸಿದೆ.