ಈಗಾಗಲೇ ಬಾಲಿವುಡ್ ನಟರಾದ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಸಂಬಂಧ ಜಗಜ್ಜಾಹೀರವಾಗಿದೆ. ಇದೇ ಸಂದರ್ಭದಲ್ಲಿ ರಣಬೀರ್ ಸಹೋದರಿ ತನ್ನ ಭಾವೀ ಅತ್ತಿಗೆಗೆ ಕಾಸ್ಟ್ಲಿ ಗಿಫ್ಟ್‌ವೊಂದನ್ನು ನೀಡಿದ್ದಾರೆ.

ಮುಂಬೈ: ಆಲಿಯಾ ಹಾಗೂ ರಣಬೀರ್ ನಡುವೆ ಸಮ್‌ಥಿಂಗ್ ಇರುವುದು ಈಗಾಗಲೇ ಜಗಜ್ಜಾಹೀರವಾಗಿದೆ. ಇವರಿಬ್ಬರ ಬಾಂಧವ್ಯವೀಗ ಡೇಟಿಂಗ್‌ಗಿಂತಲೂ ತುಸು ಮುಂದೆ ಸಾಗಿದ್ದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ.

ರಣಬೀರ್ ಸಹೋದರ ರಿದ್ಧಿಮಾ ಕಪೂರ್ ಕಾಸ್ಟ್ಲಿ ಗಿಫ್ಟ್‌ವೊಂದನ್ನು ತನ್ನ ಭಾವೀ ಅತ್ತಿಗೆ ಆಲಿಯಾ ಕೊಟ್ಟಿದ್ದಾರೆ. ಅಣ್ಣನ ಪ್ರೆಯಸಿ ಎಂಬ ಕಾರಣಕ್ಕೆ ಇಂಥದ್ದೊಂದು ಭಾರಿ ಮೊತ್ತದ ಗಿಫ್ಟ್ ನೀಡಿದ್ದಾರೆ. ಇದು ಸಾಕಿ ರಣ್ಬೀರ್ ಆಲಿಯಾ ಸಂಬಂಧ ಡೇಟಿಂಗ್‌ಗಿಂತಲೂ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ ಎಂದು ಹೇಳಲು.

ಅಂದ ಹಾಗೆ ಅದೇನೆಪ್ಪಾ ಉಡುಗೊರೆ ಎಂದರೆ, 14 ಕ್ಯಾರೋಟ್ ಚಿನ್ನದ ಬ್ರೇಸ್‌ಲೆಟ್. ಇದರ ಬೆಲೆ 27,810 ರೂ ಎನ್ನಲಾಗಿದ್ದು, ಇದನ್ನು ಖುದ್ದು ಆಲಿಯಾ ಭಟ್ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ರಿದಿಹಿಮಾಗೆ ಥ್ಯಾಂಕ್ಸ್ ಹೇಳಿ ಪೋಸ್ಟ್ ಹಾಕಿದ್ದಾರೆ.