ಮುಂಬೈ(ಸೆ.14): ಎಂ.ಎಸ್ ಧೋನಿ ಜೀವನಾಧರಿತ ‘ಎಂ.ಎಸ್ ಧೋನಿ ದಿ ಅನ್ಟೋಲ್ಡ್ ಸ್ಟೋರಿ’ ಚಿತ್ರದ ಪ್ರಮೋಷನ್'ನಲ್ಲಿ ಧೋನಿ ಕಾಣಿಸಿಕೊಳ್ಳುತ್ತಿದ್ದು, ರೀಲ್ ಧೋನಿ, ರಿಯಲ್ ಧೋನಿಯನ್ನು ಕೇಳಿದ ಪ್ರಶ್ನೆಗಳು ಸ್ವಾರಸ್ಯವಾಗಿದೆ.
ಚಿತ್ರದ ನಾಯಕ ಸುಶಾಂತ್ ಸಿಂಗ್ ರಜಪೂತ್'ನನ್ನು ಕಾಲೆಯುವ ಎಂ.ಎಸ್ ಧೋನಿ, ತನ್ನ ಬಗ್ಗೆ ಕುರಿತಾದ ಎಲ್ಲಾ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುತ್ತಾರೆ. ಆದರೆ ಕೊನೆಯಲ್ಲಿ ಸುಶಾಂತ್ ಕೇಳಿದ ಪ್ರಶ್ನೆಯೊಂದಕ್ಕೆ ಸುಸ್ತಾಗಿದ್ದಾರೆ.
ಧೋನಿಯನ್ನು ನಿಮ್ಮ ಗರ್ಲ್ ಫ್ರೆಂಡ್ಸ್ ಸಂಖ್ಯೆ ಎಷ್ಟು ಎಂದು ಕೇಳುತ್ತಿದ್ದಂತೆ ಎಂ ಎಸ್ ನಾಚಿ ನೀರಾಗಿದ್ದಾರೆ. ಈ ವಿಡಿಯೋ ಸದ್ಯ ಯೂಟುಬ್ ನಲ್ಲಿ ವೈರಲ್ ಆಗಿದೆ.
