ಬಟ್ಟೆ ಬಿಚ್ಚಿಯೇ ಸುದ್ದಿ ಮಾಡಿದ್ದ ತೆಲುಗು ನಟಿ ಶ್ರೀ ರೆಡ್ಡಿ ಇದೀಗ ಟ್ರೋಲ್ ಗೆ ಗುರಿಯಾಗಿದ್ದಾರೆ. ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬಗ್ಗೆ ಮಾತನಾಡಿದ್ದ ನಟಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಳ್ಳಲಾಗಿದೆ.
ಬೆಂಗಳೂರು[ಸೆ.12] ಕಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಇದೆ, ಪಾತ್ರ ಪಡೆಯಲು ಮಂಚ ಏರಬೇಕು ಎಂದು ಪ್ರತಿಭಟನೆ ಮಾಡಿದ್ದ ನಟಿ ಶ್ರೀ ರೆಡ್ಡಿ ಇದೀಗ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಪವರ್ ಸ್ಟಾರ್ ಪವನ್ ಕಲ್ಯಾಣ್, ನಟ ನಾನಿ ವಿರುದ್ಧ ತೆಗಳಿದ್ದ ನಟಿ ಶ್ರೀರೆಡ್ಡಿ ಇದೀಗ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬಗ್ಗೆ ಮಾಡಿದ್ಪೋದ ಪೋಸ್ಟ್ ವಿವಾದ ಹುಟ್ಟುಕಹಾಕಿದೆ.
‘ಸಚಿನ್ ತೆಂಡೂಲ್ಕರ್ ಓರ್ವ ರೋಮ್ಯಾಂಟಿಕ್ ವ್ಯಕ್ತಿ. ಅವರು ಹೈದರಾಬಾದ್ ಗೆ ಬಂದಾಗ ಚಾರ್ಮಿಂಗ್ ಗರ್ಲ್(ಚಾರ್ಮಿ ಕೌರ್) ಜತೆ ಚಕ್ಕಂದವಾಡಿದ್ರೂ, ಹೈ ಪ್ರೊಫೈಲ್ ಹೊಂದಿರುವ ಚಾಮುಂಡೇಶ್ವರ್ ಸ್ವಾಮಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದರು. ಮೈದಾನದಲ್ಲಿ ಉತ್ತಮ ಆಟವಾಡುವ ಸಚಿನ್ ಗೆ ಚೆನ್ನಾಗಿ ರೊಮ್ಯಾನ್ಸ್ ಮಾಡುವುದು ಗೊತ್ತಿರಲ್ಲವೆ? ಎಂದು ಬರೆದುಕೊಂಡಿದ್ದರು.
ಶ್ರೀರೆಡ್ಡಿಯ ಈ ಪೋಸ್ಟ್ ಕಂಡು ಕೆಂಡಾಮಂಡಲರಾದ ಸಚಿನ್ ಮತ್ತೆಂತು ಚಾರ್ಮಿ ಅಭಿಮಾನಿಗಳು ಪ್ರಶ್ನೆಗಳ ಬಾಣ ಎಸೆದಿದ್ದಲ್ಲದೆ ಅಶ್ಲೀಲ ಕಮೆಂಟ್ ಗಳ ಸಮರವನ್ನೇ ಸಾರಿದ್ದಾರೆ.
