ದರ್ಶನ್ ಸಿನಿಮಾ ನಾಯಕಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲು
ಪಶ್ಚಿಮ ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಕ್ಷೇತ್ರದಿಂದ (Amaravati Loksabh Seat) ನವ್‌ನೀತ್ ರಾಣಾ ಎರಡನೇ ಬಾರಿ ಸ್ಪರ್ಧಿಸಿದ್ದರು. 19,731 ಮತಗಳ ಅಂತರದಿಂದ Navneet Rana ಸೋತಿದ್ದಾರೆ.
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಜೊತೆ ನಟಿಸಿದ್ದ ನಟಿ ನವ್‌ನೀತ್ ಕೌರ್ ರಾಣಾ (Navneet Kaur Rana) ಲೋಕಸಭಾ ಚುನಾವಣೆಯಲ್ಲಿ ಸೋತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ (Loksabha Elections 2024) ಗೆದ್ದಿದ್ದ ನವ್‌ನೀತ್ ರಾಣಾ ಈ ಬಾರಿ ಕಾಂಗ್ರೆಸ್‌ನ ಬಲವಂತ್ ವಾಂಖೇಡೆ ವಿರುದ್ಧ ಸೋತಿದ್ದಾರೆ. ಪಶ್ಚಿಮ ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಕ್ಷೇತ್ರದಿಂದ (Amaravati Loksabh Seat) ನವ್‌ನೀತ್ ರಾಣಾ ಎರಡನೇ ಬಾರಿ ಸ್ಪರ್ಧಿಸಿದ್ದರು. 19,731 ಮತಗಳ ಅಂತರದಿಂದ ನವನೀತ್ ರಾಣಾ ಸೋತಿದ್ದಾರೆ.
ಪಡೆದ ಮತಗಳು ಹೀಗಿವೆ
ಬಲವಂತ್ ವಾಂಖೇಡೆ: 5,26,271
ನವನೀತ್ ರಾಣಾ: 5,06,540
ಮತಗಳ ಅಂತರ: 19,731
2014ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಯಿಂದ ಸ್ಪರ್ಧಿಸಿ ಸೋತಿದ್ದರು. 2019ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನವ್‌ನೀತ್ ರಾಣಾ ಗೆಲುವು ಸಾಧಿಸಿದ್ದರು. 28ನೇ ಮಾರ್ಚ್ 2024ರಲ್ಲಿ ಬಿಜೆಪಿ ಸೇರ್ಪಡೆಯಾದ ನವ್‌ನೀತ್ ರಾಣಾ ಕಮಲ ಚಿಹ್ನೆಯಡಿಯಲ್ಲಿ ಸ್ಪರ್ಧಿಸಿ ಕಡಿಮೆ ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ಈ ಬಾರಿ ಹೈದರಾಬಾದ್‌ಗೆ ತೆರಳಿದ್ದ ವೇಳೆ ನವ್‌ನೀತ್ ಠಾಣಾ ವಿವಾದಾತ್ಮಕ ಭಾಷಣ ಸಾಕಷ್ಟು ಸುದ್ದಿ ಮಾಡಿತ್ತು.
ನಿಜವಾಯ್ತು ಕಾಪ್ಸ್ ಚುನಾವಣೋತ್ತರ ಸಮೀಕ್ಷೆ:ಬಿಜೆಪಿಗೆ 15, ಕಾಂಗ್ರೆಸ್ 11,ಜೆಡಿಎಸ್‌ಗೆ 2 ಸ್ಥಾನ ಎಂದಿದ್ದ ಸರ್ವೆ
ಅಕ್ಬರುದ್ದೀನ್ ಓವೈಸಿ ಹೇಳಿದ್ದೇನು?
ಪಕ್ಷದ ಬಹಿರಂಗ ಸಭೆಯೊಂದರಲ್ಲಿ ಮಾತನಾಡಿದ್ದ ಅಕ್ಬರುದ್ದೀನ್ ಓವೈಸಿ, 15 ನಿಮಿಷ ಪೊಲೀಸರನ್ನು ತೆರವುಗೊಳಿಸಿದ್ರೆ 100 ಕೋಟಿ ಹಿಂದೂಗಳಿಗೆ ನಾವು ಏನು ಎಂದು ತೋರಿಸುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ದೇಶದಾದ್ಯಂತೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಇದೇ ಹೇಳಿಕೆಯನ್ನು ಉಲ್ಲೇಖಿಸಿ ಓವೈಸಿ ಸೋದರರಿಗೆ ತಿರುಗೇಟು ನೀಡಿದ್ದರು.
ಓವೈಸಿ ವಿರುದ್ಧ ನವ್‌ನೀತ್ ರಾಣಾ ವಾಗ್ದಾಳಿ
ಹೈದರಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಪರ ಪ್ರಚಾರ ಕಾರ್ಯಕ್ರಮದಲ್ಲಿ ಎಐಎಂಐಎಂ ಅಭ್ಯರ್ಥಿ ಅಸಾದುದ್ದೀನ್ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಸಾದುದ್ದೀನ್ ಓವೈಸಿ ಮತ್ತು ಅಕ್ಬರುದ್ದೀನ್ ಓವೈಸಿ ಇವರಿಬ್ಬರು ಅಣ್ಣ ತಮ್ಮಂದಿರು ಅಲ್ಲವಾ? ನಮಗೆ 15 ನಿಮಿಷ ಬೇಡ, ಜಸ್ಟ್ 15 ಸೆಕೆಂಡ್ ಪೊಲೀಸರನ್ನು ತೆರವುಗೊಳಿಸಿದ್ರೆ ನಾವೆಲ್ಲಿಂದ ಬಂದಿದ್ದೇವೆ ಮತ್ತು ನಾವೆಲ್ಲಿಗೆ ಹೋಗುತ್ತೇವೆ ಎಂದು ತೋರಿಸುತ್ತೇವೆ ಎಂದಿದ್ದರು. ಈ ಮೂಲಕ ಅಕ್ಬರುದ್ದೀನ್ ಒವೈಸಿ ಹೇಳಿಕೆಗೆ ನವ್‌ನೀತ್ ರಾಣಾ ತಿರುಗೇಟು ನೀಡಿದ್ದರು. ಅಕ್ಬರುದ್ದೀನ್ ಓವೈಸಿ ಸ್ಪರ್ಧಿಸಿದ್ದ ಮಾಧವಿ ಲತಾ ಸಹ ಚುನಾವಣೆಯಲ್ಲಿ ಸೋತಿದ್ದಾರೆ.
ಜೂನ್ 8ರಂದು ಪ್ರಧಾನಿ ಮೋದಿ ಪ್ರಮಾಣವಚನ ಸಾಧ್ಯತೆ
ಪಂಚ ಭಾಷೆ ಸಿನಿಮಾಗಳಲ್ಲಿ ನಟನೆ
ಮುಂಬೈ ಮೂಲದ ನವ್‌ನೀತ್ ರಾಣಾ ಬಣ್ಣದ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ಸಿನಿಮಾಗೂ ಮುನ್ನ ಮಾಡೆಲ್ ಆಗಿ ಗುರುತಿಸಿಕೊಂಡಿದ್ದ ನವ್‌ನೀತ್ ರಾಣಾ ಆರು ಮ್ಯೂಸಿಕ್ ಆಲ್ಬಂಗಳಲ್ಲಿ ಕಾಣಿಸಿಕೊಂಡಿದ್ದರು. 2004ರಲ್ಲಿ ದರ್ಶನ್ ನಟನೆಯ ದರ್ಶನ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು. ಆನಂತರ ತೆಲುಗಿನ ಸೀನು ವಸಂತಿ ಲಕ್ಷ್ಮಿ, ಸಥ್ರುವ್ವು, ಜಗಪತಿ, ಗುಡ್ ಬಾಯ್, ಸಿತಂ, ಸ್ಟೈಲ್, ರೂಮ್‌ಮೇಟ್ಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನವ್‌ನೀತ್ ರಾಣಾ ನಟಸಿದ್ದಾರೆ. ಕನ್ನಡ, ತೆಲುಗು ಜೊತೆಯಲ್ಲಿ ತಮಿಳು, ಮಲಯಾಳಂ, ಪಂಜಾಬಿ ಹಾಗೂ ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.