ಮುಂಬೈ (ನ. 06): ಸಿಖ್ಖರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿರುವ ಆರೋಪದಲ್ಲಿ ನಟ ಶಾರೂಕ್ ಕಾನ್ ಹಾಗೂ ಜೀರೋ ನಿರ್ದೇಶಕ ಆನಂದ್ ಎಲ್ ರೈ ವಿರುದ್ಧ ದೆಹಲಿ ಸಿಖ್ ಗುರುದ್ವಾರ ಆಡಳಿತ ಮಂಡಳಿ ಕಾರ್ಯದರ್ಶಿ ಮಂಜಿಂದೆರ್ ಸಿಂಗ್ ದೂರು ದಾಖಲಿಸಿದ್ದಾರೆ. 

ಜೀರೋ ಚಿತ್ರದ ಪ್ರೋಮೋದಲ್ಲಿ ಶಾರೂಕ್ ಖಾನ್ ಸಿಖ್ಖರ ಪೂಜ್ಯನೀಯ ಆಯುಧ ಗತ್ರಾ ಕಿರ್ಪಾನ್ ನನ್ನು ಹಿಡಿದುಕೊಂಡಿರುವುದು ನಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆನಂದ್ ಎಲ್ ರೈ ಆರೋಪಿಸಿದ್ದಾರೆ. 

ಸಿಖ್ಖರ ನಂಬಿಕೆ ಪ್ರಕಾರ ಗತ್ರಾ ಕರ್ಪಾನನ್ನು ಅಮೃತಧಾರಿ ಸಿಖ್ ಮಾತ್ರ ಧರಿಸಬೇಕು. ಬೇರೆಯವರು ಧರಿಸುವಂತಿಲ್ಲ ಎಂಬ ನಿಯಮವಿದೆ. ಶಾರೂಕ್ ಖಾನ್ ಧರಿಸಿರುವುದು ನಮ್ಮ ನಂಬಿಕೆಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ. 

ಸಿಖ್ ಸಮುದಾಯಕ್ಕೆ ಅವಮಾನ ಮಾಡುವಂತಹ ಸಿನಿಮಾದಲ್ಲಿರುವ ಆಕ್ಷೆಪಾರ್ಹ ಸೀನ್ ಗಳನ್ನು ತೆಗೆದು ಹಾಕುವಂತೆ ನಿರ್ದೇಶಕ ಆನಂದ್ ರೈಗೆ  ಮಂಜಿಂದೆರ್ ಸಿಂಗ್ ಕೇಳಿಕೊಂಡಿದ್ದಾರೆ. ಇಲ್ಲದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.