ಕಣ್ಣು ಹೊಡೆಯುವ ಮೂಲಕ ಪಡ್ಡೆಗಳ ನಿದ್ದೆ ಗೆಡಿಸಿದ್ದ ಮಲಯಾಳಂ ನಟಿ ಪ್ರಿಯಾ ವಾರಿಯರ್ ಮೇಲೆ ಮೂಲಭೂತವಾದಿಗಳ ಕಣ್ಣು ಬಿದ್ದಿದೆ.

ಹೈದರಾಬಾದ್ : ಕಣ್ಣು ಹೊಡೆಯುವ ಮೂಲಕ ಪಡ್ಡೆಗಳ ನಿದ್ದೆ ಗೆಡಿಸಿದ್ದ ಮಲಯಾಳಂ ನಟಿ ಪ್ರಿಯಾ ವಾರಿಯರ್ ಮೇಲೆ ಮೂಲಭೂತವಾದಿಗಳ ಕಣ್ಣು ಬಿದ್ದಿದೆ.

ಆಕೆ ನಟಿಸಿದ ಹಾಡಿನಲ್ಲಿ ಮುಸ್ಲಿಂ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎಂದು ಆರೋಪ ಮಾಡಿ ದೂರು ದಾಖಲು ಮಾಡಲಾಗಿದೆ.

ಪ್ರಿಯಾ ಪ್ರಕಾಶ್ ವಿರುದ್ಧ ಹೈದರಾಬಾದ್​​​ನ ಫಾರೂಕ್​​ನಗರ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 

‘ಒರು ಆದಾರ್​​​ ಲವ್​​​’ ಹಾಡಿನ ದೃಶ್ಯ ದ ಬಗ್ಗೆ ಮೂಲಭೂತವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಸಂಬಂಧ ಸಿನಿಮಾ ನಿರ್ಮಾಪಕರ ವಿರುದ್ಧವೂ ಕೂಡ ಪ್ರಕರಣ ದಾಖಲು ಮಾಡಲಾಗಿದೆ.