ಕನ್ನಡ ಬಿಗ್​ಬಾಸ್​​ನಲ್ಲಿ ಸೆಲಬ್ರೆಟಿಯಲ್ಲದೆ ಪ್ರಥಮ್​ ಗೆದ್ದು ಬೀಗಿದ್ದಾರೆ. ಜೊತೆಗೆ ಬಹುಮಾನದ ಮೊತ್ತ 50 ಲಕ್ಷ ರೂಪಾಯಿಯನ್ನು ದಾನವಾಗಿ ನೀಡಿದ್ದಾರೆ. ಅದೇ ರೀತಿ ಬಿಗ್​ ಬಾಸ್​ ಸೀಸನ್ 10ರಲ್ಲೂ ಜನಸಾಮಾನ್ಯನೇ ಜಯಶಾಲಿಯಾಗಿದ್ದಾನೆ. ಗೆದ್ದ 40 ಲಕ್ಷ ಹಣವನ್ನು ಸಲ್ಮಾನ್​'ರ ಬೀಯಿಂಗ್ ಹ್ಯುಮನ್ ಚಾರಿಟಿ ಸಂಸ್ಥೆಗೆ ಕೊಡುಗೆಯಾಗಿ ನೀಡಿದ್ದಾರೆ.

ನೋಯ್ಡಾ ಮೂಲದ ಮಾನ್ವೀರ್ರ್‌ ಗುರ್ಜರ್‌ ಹಿಂದಿಯ ಬಿಗ್‌ಬಾಸ್‌ ಸೀಸನ್‌ 10ರ ವಿಜೇತರಾಗಿ ಇತಿಹಾಸ ಸೃಷ್ಟಿಸಿದರು. ಇದೇ ಮೊದಲ ಬಾರಿಗೆ ಸೆಲೆಬ್ರಿಟಿ ಅಲ್ಲದ ಜನಸಾಮಾನ್ಯ ಸ್ಪರ್ಧಿಯೊಬ್ಬರು ಬಿಗ್‌'ಬಾಸ್‌ ಕಿರೀಟ ಧರಿಸಿದ್ದು ಅಚ್ಚರಿಗೆ ಕಾರಣವಾಯಿತು. ಬಿಗ್‌'ಬಾಸ್‌ ವಿವಾದಾತ್ಮಕ ರಿಯಾಲಿಟಿ ಶೋ ಎಂಬ ಹಣೆಪಟ್ಟಿ ಪಡೆದ ನಂತರ ಹಿಂದಿ ಬಿಗ್‌ಬಾಸ್‌'ನಲ್ಲಿ ಕೆಲ ಹೊಸ ಮಾರ್ಪಾಡುಗಳನ್ನು ಮಾಡಲಾಗಿತ್ತು. ಸೆಲೆಬ್ರಿಟಿಗಳ ಜೊತೆ ಜನಸಾಮಾನ್ಯರನ್ನೂ ಬಿಗ್‌'ಬಾಸ್‌ ಮನೆಯೊಳಗೆ ಕಳುಹಿಸಿಕೊಡಲಾಗಿತ್ತು.

ಈ ಘಟಾನುಘಟಿ ಸೆಲೆಬ್ರಿಟಿಗಳ ಮಧ್ಯದಲ್ಲಿ ನೊಯ್ಡಾದ ಓರ್ವ ಕೃಷಿಕ ಮಾನ್ವೀರ್‌ ಅವರನ್ನು ಬಿಗ್‌ಬಾಸ್‌ ಗ್ರ್ಯಾಂಡ್‌ ಫಿನಾಲೆಯಲ್ಲಿ ವಿನ್ನರ್‌ ಎಂದು ಘೋಷಿಸಲಾಯಿತು. ಮಾನವೀರ್​ ಅವರ ತಂದೆ ಬಹುಮಾನವಾಗಿ ಬಂದ 40 ಲಕ್ಷ ರೂಪಾಯಿಗಳಲ್ಲಿ ಅರ್ಧದಷ್ಟು ಭಾಗವನ್ನು ಸಲ್ಮಾನ್‌ ಖಾನ್‌ ಅವರ ಬೀಯಿಂಗ್‌ ಹ್ಯುಮನ್‌ ಚಾರಿಟಿ ಸಂಸ್ಥೆಗೆ ಕೊಡುಗೆಯಾಗಿ ನೀಡಿದ್ದು ವಿಶೇಷವಾಗಿತ್ತು.