ಪ್ರೇಮ್ ಎಂದಾಕ್ಷಣ ಇವರು ಸ್ಟಾರ್ ನಟರೊಂದಿಗೆ ಮಾತ್ರ ಸಿನಿಮಾ ಮಾಡುವುದು ಎಂದು ಹುಟ್ಟು ಹಾಕಿರುವ ಅಭಿಪ್ರಾಯಕ್ಕೆ ಈಗ ಬ್ರೇಕ್ ಹಾಕಿದ್ದಾರೆ. ರಕ್ಷಿತಾ ಪ್ರೇಮ್ ಸಹೋದರ ರಾಣಾ ನಾಯಕನಾಗಿ ಅಭಿನಯಿಸುತ್ತಿರುವ ಏಕ್ ಲವ್ ಯಾ ಸಿನಿಮಾಗೆ ಇವರು ನಿರ್ದೇಶನ ಮಾಡುತ್ತಿದ್ದಾರೆ.

ರಕ್ಷಿತಾ ಪ್ರೇಮ್ ಕೈಯಲ್ಲಿ ತಗಲ್ಲಾಕ್ಕೊಂಡ್ರಾ ಡಿಂಪಲ್ ಕ್ವೀನ್?

 

'ಏಕ್‌ ಲವ್ ಯಾ' ಚಿತ್ರದಲ್ಲಿ ಇನ್ನು ಹೆಚ್ಚು ಜೋಶ್ ತುಂಬಿಸಲು ಯುವ ಕಲಾವಿದರಿಗೆ ಅವಕಾಶ ನೀಡಿದ್ದಾರೆ ಪ್ರೇಮ್. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಸಾಕಷ್ಟು ಹೆಸರು ಮಾಡಿದ ಸೂರಜ್‌ ಪ್ರೇಮ್‌ ಹಾಗೂ ಪ್ಯಾಕು ಪ್ಯಾಕು ಅಲಿಯಾಸ್ ಹಿತೇಶ್ ಮತ್ತು ವಿಭಿನ್ನ ಶೈಲಿಯಲ್ಲಿ ಸ್ಫೂರ್ತಿ ಆಗುವಂತ ಟಿಕ್‌ಟಾಕ್‌ ಮಾಡಿಕೊಂಡು ಖ್ಯಾತರಾಗಿರುವ ಆರೂವರೆ ಅಡಿ ಎತ್ತರದ ಕಾಲ್‌ ಕೆ.ಜಿ ಖಂಡ ಅಲಿಯಾಸ್ ನಿಖಿಲ್ ಗೌಡ ಅಭಿನಯಿಸುತ್ತಿದ್ದಾರೆ.

ಕೂರ್ಗ್ ಕುವರಿಯನ್ನು ಬೆಳ್ಳಿತೆರೆಗೆ ಕರೆತಂದ ಜೋಗಿ ಪ್ರೇಮ್!

ಪ್ರೇಮ್ ಸಿನಿಮಾ ಅದ್ಮೇಲೆ ಸೂಪರ್ ಹಿಟ್‌ ಹಾಡುಗಳಂತೂ ಗ್ಯಾರಂಟಿ. ಈ ಸಿನಿಮಾದಲ್ಲಿ ಸೂಪರ್ ಹಾಡುಗಳು, ಕಾಮಿಡಿ ಇರುವುದರಲ್ಲಿ ಅನುಮಾನವೇ ಇಲ್ಲ.