ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ವಿವಾಹ

Comedy Kiladi Nayana Marriage
Highlights

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ  ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಿ ಕನ್ನಡ ವಾಹಿನಿಯಲ್ಲಿ  ಪ್ರಸಾರವಾಗಿದ್ದ  ಕಾಮಿಡಿ ಕಿಲಾಡಿ ಸೀಸನ್ ಫಸ್ಟ್’ನಲ್ಲಿ ಸ್ಪರ್ಧಿಯಾಗಿ ರನ್ನರ್ ಅಪ್ ಆಗಿದ್ದ ನಯನಾ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

ಬೆಂಗಳೂರು : ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ  ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಿ ಕನ್ನಡ ವಾಹಿನಿಯಲ್ಲಿ  ಪ್ರಸಾರವಾಗಿದ್ದ  ಕಾಮಿಡಿ ಕಿಲಾಡಿ ಸೀಸನ್ ಫಸ್ಟ್’ನಲ್ಲಿ ಸ್ಪರ್ಧಿಯಾಗಿ ರನ್ನರ್ ಅಪ್ ಆಗಿದ್ದರು.  

ಅವರ ಸಂಬಂಧಿಯೇ ಆಗಿರುವ ಬೆಂಗಳೂರಿನ ಉದ್ಯಮಿ ಶರತ್ ಅವರೊಂದಿಗೆ ನಯನಾ ಮದುವೆ ನಡೆದಿದೆ. ಧರ್ಮಸ್ಥಳದಲ್ಲಿ ಇಬ್ಬರೂ ವಿವಾಹ ಮಾಡಿಕೊಂಡಿದ್ದು, ಅರತಕ್ಷತೆ ಕಾರ್ಯಕ್ರಮ ನಡೆದಿದೆ. ನಯನಾ ಅವರದ್ದು ಪಕ್ಕಾ ಅರೆಂಜ್ ಮ್ಯಾರೇಜ್ ಆಗಿದ್ದು, ಕುಟುಂಬಸ್ಥರೇ ನೋಡಿ ಮಾಡಿರುವಂತದ್ದಾಗಿದೆ.

ಕಾಮಿಡಿ ಕಿಲಾಡಿಯ ಶೋ ಮೂಲಕ ಚಿರಪರಿಚಿತರಾಗಿದ್ದ ನಯನಾ ಅವರು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದು, ಬಳಿಕ ಸಿನಿಮಾ ಇಂಡಸ್ಟ್ರಿಗೂ ಕೂಡ ಕಾಲಿಟ್ಟಿದ್ದಾರೆ. ಕೆಲ ಚಿತ್ರಗಳಲ್ಲಿಯೂ ಕೂಡ ನಟಿಸಿದ್ದ ಅವರು ಶರತ್ ಅವರ ಕೈ ಹಿಡಿದಿದ್ದು, ಅವರಿಗೆ ಶುಭ ಹಾರೈಸೋಣ.

loader